ಉಪನ್ಯಾಸಕಿ ವೃತ್ತಿಗೆ ಮರಳಲಿರುವ ಐಎಂಎಫ್‌ ನ ಮುಖ್ಯ ಆರ್ಥಿಕ ತಜ್ಞೆ, ಮೈಸೂರು ಮೂಲದ ಗೀತಾ ಗೋಪಿನಾಥ್

Update: 2021-10-20 16:02 GMT
photo:twitter/@GitaGopinath

ವಾಷಿಂಗ್ಟನ್ ಡಿಸಿ, ಅ.20: ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕಿ ಗೀತಾ ಗೋಪೀನಾಥ್ 2022ರ ಜನವರಿಯಲ್ಲಿ ನಿರ್ಗಮಿಸಲಿದ್ದಾರೆ ಎಂದು ಐಎಂಎಫ್ ಮಂಗಳವಾರ ಘೋಷಿಸಿದೆ.

ಗೀತಾ ಗೋಪೀನಾಥ್ ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ವಿಭಾಗದ ಕೆಲಸಕ್ಕೆ ಮರಳಲಿದ್ದಾರೆ . ವಿವಿಯಲ್ಲಿ ರಜೆಯ ಮೇಲಿದ್ದ ಸಂದರ್ಭ ಅವರು ಸಾರ್ವಜನಿಕ ಸೇವೆಗೆ ಸೇರಿದ್ದು ರಜಾಅವಧಿ 2022ರ ಜನವರಿಯಲ್ಲಿ ಕೊನೆಗೊಳ್ಳಲಿದೆ. ಕೆಲವು ಅಸಾಧಾರಣ ಸಂದರ್ಭದಲ್ಲಿ ರಜಾ ಅವಧಿಯನ್ನು ವಿಸ್ತರಿಸುವ ಅವಕಾಶವಿದ್ದು ಅಂತೆಯೇ ಗೀತಾ ಅವರ ರಜೆಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಆದ್ದರಿಂದ ಅವರು ಐಎಂಎಫ್ನಲ್ಲಿ 3 ವರ್ಷ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.

ಐಎಂಎಫ್ ಗೆ ಗೀತಾ ಗೋಪಿನಾಥನ್ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ.ಐಎಂಎಫ್ ಪ್ರಥಮ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಇತಿಹಾಸ ನಿರ್ಮಿಸಿದ್ದು ತಮ್ಮ ಅಪಾರ ಜ್ಞಾನ ಮತ್ತು ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ಮೈಕ್ರೊಇಕನಾಮಿಕ್ಸ್ ಕ್ಷೇತ್ರಗಳಲ್ಲಿ ತಮಗಿದ್ದ ಅಪಾರ ಅನುಭವದಿಂದ ಐಎಂಎಫ್ ಗೆ ಎದುರಾಗಿದ್ದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದುರಿಸಲು ನೆರವಾಗಿದ್ದಾರೆ ಎಂದು ಐಎಂಎಫ್ ನ ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿಯೇವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News