ನಿಹಾಂಗ್ ನಾಯಕನ ಜೊತೆ ಸಚಿವ ತೋಮರ್‌ ಮಾತುಕತೆ: ವಿವಾದಿತ ಫೋಟೋ ಕುರಿತ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2021-10-21 12:55 GMT
photo;The Tribune

 ಹೊಸದಿಲ್ಲಿ,ಆ.2: ಕೃಷಿ ಕಾಯ್ದೆ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ದಲಿತ ಸಿಖ್ಖ್ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು  ನಿಹಾಂಗ್ ಸಿಖ್ಖರನ್ನು ಬಂಧಿಸಿದ ಕೆಲವೇ ದಿನಗಳ ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರು ನಿಹಾಂಗ್ ನಾಯಕನೊಬ್ಬನ ಜೊತೆಗಿರುವಂತೆ ತೋರಿಸಲಾದ ಛಾಯಾಚಿತ್ರವೊಂದು ಬೆಳಕಿಗೆ ಬಂದಿದ್ದು ವಿವಾದದ ಕಿಡಿಯೆಬ್ಬಿಸಿದೆ.

ಅಕ್ಟೋಬರ್ 15ರಂದು ದಿಲ್ಲಿ ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿರುವ ಬ್ಯಾರಿಕೇಡೆ ಗೆ ದಲಿತ ಸಿಖ್ಖ್ ಯುವಕನ ವಿರೂಪಗೊಂಡ ಮೃತದೇಹವನ್ನು ಕಟ್ಟಿಹಾಕಲಾಗಿತ್ತು. ಸಿಖ್ಖರ ಪವಿತ್ರಗ್ರಂಥ ಗುರುಗ್ರಂಥ ಸಾಹೀಬ್ ಆತ ಅವಮಾನ ಮಾಡಿದ್ದನ್ನೆನ್ನಲಾಗಿದೆ. ಆನಂತರ ಪ್ರಕಟವಾದ ವೀಡಿಯೊವೊಂದರಲ್ಲಿ ನಿಹಾಂಗ್ ಸಿಖ್ಖರ ಗುಂಪೊಂದು ಈ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿತ್ತು.

ಯುವಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಸದಸ್ಯರಾಗಿರುವ ಪಂಥದ ನಾಯಕನಾದ ಅಮಾನ್ ಸಿಂಗ್ ಅನ್ನು ಎರಡು ತಿಂಗಳ ಹಿಂದೆ ಕೇಂದ್ರ ಸಚಿವ ತೋಮಾರ್ ಹಾಗೂ ಕೆಲವು ಬಿಜೆಪಿ ನಾಯಕರು ಭೇಟಿಯಾಗಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ನ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುವಂತೆ ತನಗೆ 10 ಲಕ್ಷ ರೂ.ಗಳ ಆಮಿಷವನ್ನುಮಾತುಕತೆಯ ಸಂದರ್ಭ ಒಡ್ಡಲಾಗಿತ್ತು. ಆದರೆ ತಾನು ಆ ಕೊಡುಗೆಯನ್ನು ತಿರಸ್ಕರಿಸಿದ್ದಾಗಿ ಅಮಾನ್ ಸಿಂಗ್ ಹೇಳಿರುವುದಾಗಿ ದಿ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ‘ ಕೃಷಿ ತಿದ್ದುಪಡಿ ಕಾನೂನುಗಳ ಹಿಂತೆಗೆತ, 2015ರಿಂದೀಚೆಗೆ ಪಂಜಾಬ ನಲ್ಲಿ ನಡೆದಿರುವ ಧಾರ್ಮಿಕ ಅಪಾವಿತ್ರತೆಯ ಪ್ರಕರಣಗಳಲ್ಲಿ ನ್ಯಾಯ ದೊರಕಿಸಿಕೊಡುವುದು ಹಾಗೂ ಪ್ರತಿಭಟನಾ ನಿರ ರೈತರ ವಿರುದ್ಧದ ಪ್ರಕರಣಗಳ ಹಿಂತೆಗೆತ’’ ಈ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದ್ದಾಗಿ ಅಮಾನ್ ಸಿಂಗ್ ತಿಳಿಸಿದ್ದಾನೆ. ಬೇಡಿಕೆಗಳು ಈಡೇರಿದಲ್ಲಿ ಮಾತ್ರವೇ ಪ್ರತಿಭಟನೆಯನ್ನು ಹಿಂಪಡೆಯುವುದಾಗಿಯೂ ತಾನು ಸರಕಾರಕ್ಕೆ ತಿಳಿಸಿರುವುದಾಗಿ ಅಮಾನ್ ಸಿಂಗ್ ತಿಳಿಸಿದ್ದನೆಂದು ದಿ ಟ್ರಿಬ್ಯೂನ್ ಪತ್ರಿಕೆ ವರದಿ ಹೇಳಿದೆ.

ಈ ಬಗ್ಗೆ ಕೃಷಿ ಸಚಿವಾಲಯವು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಅದು ಅಧಿಕೃತ ಸಭೆಯಾಗಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆಂದು ದಿ ಹಿಂದೂ ವರದಿ ತಿಳಿಸಿದೆ. ಈ ವರ್ಷದ ಜುಲೈಯಲ್ಲಿ ಕೇಂದ್ರದ ಸಹಾಯಕ ಕೃಷಿ ಸಚಿವ ಕೈಲಾಶ್ ಚೌಧುರಿ ಅವರ ನಿವಾಸದಲ್ಲಿ ನಡೆದ ಸಭೆಯ ಛಾಯಾಚಿತ್ರ ಇದಾಗಿದೆಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದರೆ.

ಆದಾಗ್ಯೂ ಆ ಸಭೆಯು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾಗಿತ್ತು ಎಂಬುದನ್ನು ಸ್ಪಷ್ಟಪಡಿಸಲು ಅಧಿಕಾರಿ ನಿರಾಕರಿಸಿದ್ದಾರೆ.

ಸಭೆಯ ಛಾಯಾಚಿತ್ರವು ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆಯೇ ಪಂಜಾಬ್ ನ ಕಾಂಗ್ರೆಸ್ ಸರಕಾರದ ಉಪಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ಹೇಳಿಕೆಯೊಂದನ್ನು ನೀಡಿ, ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಳಂಕ ತರಲು ಆಳವಾದ ಸಂಚು ನಡೆಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.

ನಿಹಾಂಗ್ ಸಿಖ್ಖರ ಪೈಕಿ ಒಬ್ಬಾತ ಭಾರತ ಸರಕಾರದ ಜೊತೆ ಅದರಲ್ಲೂ ವಿಶೇಷವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮಾರ್ ಅವರೊಂದಿಗೆ ಸಂಪರ್ಕದಲ್ಲಿರುವುದು ಇತ್ತೀಚೆಗೆ ಬಯಲಾಗುವುದರೊಂದಿಗೆ ಲಖೀಂಪುರದ ಹಿಂಸಾಚಾರ ಘಟನೆಯು ಸಂಪೂರ್ಣವಾಗಿ ವಿಭಿನ್ನವಾದ ತಿರುವನ್ನು ಪಡೆದಿದೆ ಎಂದು ರಾಂಧಾವಾ ತಿಳಿಸಿದ್ದಾರೆ.

ತೋಮಾರ್ ಜೊತೆಗಿನ ತಾನು ನಡೆಸಿದ್ದ ಮಾತುಕತೆಯ ಬಗ್ಗೆ ನಿಹಾಂಗ್ ಪಂಥನ ವರಿಷ್ಠ ಅಮಾನ್ ಸಿಂಗ್ ರೈತ ಒಕ್ಕೂಟಗಳಿಗೆ ಮಾಹಿತಿ ನೀಡಬೇಕಿತ್ತೆಂದು ಸುಖ್ಜೀಂದರ್ಸಿಂಗ್ ತಿಳಿಸಿದ್ದಾರೆ.

 ‘‘ಇತ್ತೀಚೆಗೆ ಲಭ್ಯವಾಗಿರುವ ಛಾಯಾಚಿತ್ರದ ಪುರಾವೆಗಳ ಪ್ರಕಾರ, ಯಾವ ನೆಲೆಯಲ್ಲಿ ತಾನು ಕೇಂದ್ರ ಕೃಷಿ ಸಚಿವ ಎನ್.ಎಸ್.ತೋಮಾರ್ ಅವರನ್ನು ಭೇಟಿಯಾದ್ದೆ ಮತ್ತು ಹಾಗೆ ಮಾಡುವಂತೆ ತನಗೆೆ ರೈತ ಸಂಘಟನೆಗಳು ಆದೇಶಿಸಿದ್ದವೆಯೇ ಎಂಬುದನ್ನು ನಿಹಾಂಗ್ ನಾಯಕನು ಬಹಿರಂಗಪಡಿಸಬೇಕೆಂದು ಸುಖ್ಜಿಂದರ್ ಸಿಂಗ್ ಆಗ್ರರಿಸಿದ್ದಾರೆ.

ಸಚಿವ ತೋಮಾರ್ ಹಾಗೂ ನಿಹಾಂಗ್ ನಾಯಕ ನಡುವೆ ನಡೆದ ಮಾತುಕತೆಗಳು ಜನರ ಮನದಲ್ಲಿ ಸಂದೇಗಳನ್ನು ಸೃಷ್ಟಿಸಿದ್ದು, ಅವುು ನಿವಾರಣೆಯಾಗಬೇಕಾದ ಅಗತ್ಯವಿದೆ ಎಂದು ಸುಖ್ಜೀಂದರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News