ಡ್ರಗ್ಸ್ ಪ್ರಕರಣ:ನಟ ಶಾರುಖ್ ಮನೆಯಲ್ಲಿ ಎನ್ ಸಿಬಿ ತಂಡ ಶೋಧ

Update: 2021-10-21 07:55 GMT
photo: TWITTER

ಹೊಸದಿಲ್ಲಿ: ಮುಂಬೈ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ  ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಣ ಬ್ಯೂರೋ(ಎನ್ ಸಿಬಿ)ಬಾಲಿವುಡ್ ನಟ ಶಾರೂಖ್ ಖಾನ್ ಅವರ ನಿವಾಸ ಮನ್ನತ್ ಗೆ ತೆರಳಿ ಶೋಧ ಕಾರ್ಯ ನಡೆಸಿದೆ.

ಶಾರುಖ್  ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಇದೇ ವೇಳೆ ನಟಿ ಅನನ್ಯ ಪಾಂಡ್ಯ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿರುವ ಎನ್ ಸಿಬಿ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

22ರ ಹರೆಯದ ಅನನ್ಯ 2019ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅನನ್ಯ ಅವರನ್ನು ಎನ್ ಸಿಬಿಯ ಮುಂಬೈ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News