ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವರ್ಗಾವಣೆ ಕೋರಿ ಕಂಗನಾ ಮನವಿ ತಿರಸ್ಕರಿಸಿದ ನ್ಯಾಯಾಲಯ

Update: 2021-10-21 12:41 GMT
photo: twitter

ಮುಂಬೈ: ಸಾಹಿತಿ ಜಾವೇದ್ ಅಖ್ತರ್ ತನ್ನ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತು ಈಗ ನಡೆಯುತ್ತಿರುವ ವಿಚಾರಣೆಯನ್ನು ವರ್ಗಾಯಿಸುವಂತೆ ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಕಳೆದ ತಿಂಗಳು ರಣಾವತ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾವಣೆ ಮನವಿಯನ್ನು ಸಲ್ಲಿಸಿದ್ದರು. ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮತ್ತೊಬ್ಬ ನ್ಯಾಯಾಧೀಶರ ಮುಂದೆ ಪ್ರಕರಣವನ್ನು ಮರುಹಂಚಿಕೆ ಮಾಡಬೇಕು. ಏಕೆಂದರೆ ನಾನು ಅದರಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಎಂದಿದ್ದರು.

ರಣಾವತ್ ಮನವಿಯನ್ನು ವಿರೋಧಿಸಿದ ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ಅಂಧೇರಿ ನ್ಯಾಯಾಲಯವು ಫೆಬ್ರವರಿಯಲ್ಲಿ ರಣಾವತ್  ವಿರುದ್ಧ ಪ್ರಕ್ರಿಯೆಯನ್ನು ಹೊರಡಿಸಿದ್ದು, ಮಾನನಷ್ಟದ ಪ್ರಾಥಮಿಕ ಪ್ರಕರಣವನ್ನು ಗಮನಿಸಲಾಯಿತು. ಆಕೆಯ 'ಉದ್ದೇಶಪೂರ್ವಕ ಅನುಪಸ್ಥಿತಿ' ಪ್ರಕರಣವನ್ನು ವಿಳಂಬ ಮಾಡಿತು ಹಾಗೂ ಅಖ್ತರ್ ಗೆ  ಮತ್ತಷ್ಟು ಕಿರುಕುಳಕ್ಕೆ ಕಾರಣವಾಯಿತು ಎಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News