ಸಂಯುಕ್ತ ಕಿಸಾನ್ ಮೋರ್ಚಾದಿಂದ ಉಚ್ಚಾಟನೆ: ನಿರ್ಧಾರವನ್ನು ಗೌರವಿಸುತ್ತೇನೆ ಎಂದ ಯೋಗೇಂದ್ರ ಯಾದವ್

Update: 2021-10-22 12:56 GMT

ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಅವರನ್ನು ಒಂದು ತಿಂಗಳ ಕಾಲ ಸಂಯುಕ್ತ ಕಿಸಾನ್ ಮೋರ್ಚಾದಿಂದ ವಜಾಗೊಳಿಸಲಾದ  ಮರುದಿನ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ತಾವು ಮೋರ್ಚಾದ ನಿರ್ಧಾರವನ್ನು  ಗೌರವಿಸುವುದಾಗಿ ಹೇಳಿದ್ದಾರಲ್ಲದೆ ತಮಗೆ ನೀಡಲಾದ ಶಿಕ್ಷೆಯನ್ನು ಸಂತೋಷದಿಂದ ಒಪ್ಪಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.

ಐತಿಹಾಸಿಕ ರೈತರ ಹೋರಾಟದ ಯಶಸ್ಸಿಗೆ ಹಿಂದಿಗಿಂತಲೂ ಹೆಚ್ಚಿನ ಶ್ರಮವಹಿಸಿ ದುಡಿಯುವುದನ್ನು ಮುಂದುವರಿಸುವುದಾಗಿಯೂ ಅವರು ಹೇಳಿದ್ದಾರೆ.

ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಯೋಗೇಂದ್ರ ಯಾದವ್ ಭೇಟಿಯಾದಂದಿನಿಂದ ಅವರ ವಜಾಗೆ ಹೆಚ್ಚಿನ ಆಗ್ರಹ ಕೇಳಿ ಬಂದಿತ್ತು.

``ಘಟನೆಯಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಅವರ ಮನೆಗೆ ಮಾನವೀಯ ಕಳಕಳಿಯಿಂದ ಹೋಗಿದ್ದೇನೆ. ಒಂದು ಹೋರಾಟ ಈ ರೀತಿ ಸಾರ್ವಕಜನಿಕವಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಬಲಗೊಳ್ಳುತ್ತದೆಯೇ ಹೊರತು ದುರ್ಬಲಗೊಳ್ಳುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ,'' ಎಂದು ಅವರು ಹೇಳಿದ್ದಾರೆ.

ಮೃತ ಬಿಜೆಪಿ ಕಾರ್ಯಕರ್ತನ ನಿವಾಸಕ್ಕೆ ತೆರಳುವ ಮುನ್ನ ರೈತ ನಾಯಕರೊಂದಿಗೆ ಸಮಾಲೋಚಿಸದೇ ಇದ್ದುದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News