ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನನ್ನ ಬಸ್ ಚಾಲಕ ಸ್ನೇಹಿತನಿಗೆ ಅರ್ಪಿಸುವೆ: ರಜನಿಕಾಂತ್

Update: 2021-10-25 12:39 GMT

ಹೊಸದಿಲ್ಲಿ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸೂಪರ್ ಸ್ಟಾರ್, ತಮ್ಮ ಹಳೆಯ ಬಸ್ ಚಾಲಕ ಸ್ನೇಹಿತನಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಸಮರ್ಪಿಸಿದರು. ಬಸ್ ಚಾಲಕ ಸ್ನೇಹಿತನೇ ರಜನಿಕಾಂತ್ ಅವರಿಗೆ ಸಿನೆಮಾರಂಗ ಸೇರುವಂತೆ ಸಲಹೆ ನೀಡಿದ್ದರಂತೆ.

ತಮ್ಮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಜನಿಕಾಂತ್ ಅವರು ತಮ್ಮ ಮೊದಲ ಚಿತ್ರ ಅಪೂರ್ವ ರಾಗಂಗಲ್ ನಿರ್ದೇಶಿಸಿದ ದಿವಂಗತ ಚಲನಚಿತ್ರ ನಿರ್ಮಾಪಕ ಕೆ ಬಾಲಚಂದರ್, ಅವರ ಸಹೋದರ ಸತ್ಯನಾರಾಯಣ ರಾವ್ , ಅದರ ನಿರ್ದೇಶಕರು, ನಿರ್ಮಾಪಕರು, ಥಿಯೇಟರ್ ಮಾಲೀಕರು, ತಂತ್ರಜ್ಞರು ಮತ್ತು ಅಭಿಮಾನಿಗಳಿಗೂ ಸಮರ್ಪಿಸಿದರು.

'ಅಸುರನ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ತಮ್ಮ ಅಳಿಯ ಧನುಷ್ ಅವರೊಂದಿಗೆ ರಜನಿಕಾಂತ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ರಜನಿಕಾಂತ್ ಅವರ ಪತ್ನಿ ಲತಾ ಮತ್ತು ಧನುಷ್ ಅವರನ್ನು ಮದುವೆಯಾಗಿರುವ ಅವರ ಪುತ್ರಿ ಐಶ್ವರ್ಯಾ ಕೂಡ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News