ಸುಡಾನ್: ಕ್ಷಿಪ್ರಕ್ರಾಂತಿ ವಿರೋಧಿಸಿ ಮುಂದುವರಿದ ಪ್ರತಿಭಟನೆ
ಖರ್ಟೂಮ್,ಅ.26: ಸುಡಾನ್‌ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತಾಹ್ ಬರ್ಹಾನ್ ನೇತೃತ್ವದಲ್ಲಿ ಸೋಮವಾರ ನಡೆದ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ರಾಜಧಾನಿ ಖರ್ಟೂಮ್‌ನಲ್ಲಿ ಸತತ 2ನೇ ದಿನವೂ ಪ್ರತಿಭಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸರಕಾರವನ್ನು ವಿಸರ್ಜಿಸಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಜನರಲ್ ಬರ್ಹಾನ್ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಾವಿರಾರು ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಹಿಂಸಾತ್ಮಕ ಕ್ರಮ ಕೈಗೊಂಡಿದ್ದು ಸೋಮವಾರ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್‌ಜಝೀರಾ ವರದಿ ಮಾಡಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು ಖರ್ಟೂಮ್‌ನಲ್ಲಿ ಕೆಲವು ರಸ್ತೆಗಳು, ಸೇತುವೆಗಳು ಹಾಗೂ ವಿಮಾನ ನಿಲ್ದಾಣವನ್ನು ಸೇನೆಯು ಮುಚ್ಚಿದೆ.
ಸುಡಾನ್‌ನ ಕ್ಷಿಪ್ರಕ್ರಾಂತಿಗೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದ್ದು ಆ ದೇಶದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ಸೇರಿ ಚಚಿಸರ್ಲಿದೆ ಎಂದು ಮೂಲಗಳು ಹೇಳಿವೆ.