ಚಿಕಿತ್ಸೆಗಾಗಿ ಆಗಮಿಸಿದ್ದ ಪಾಕಿಸ್ತಾನೀಯರ ವಿರುದ್ಧ ಅನಗತ್ಯ ಪ್ರಕರಣ ದಾಖಲು: ಪೊಲೀಸರಿಗೆ ಕೇರಳ ಹೈಕೋರ್ಟ್‌ ತರಾಟೆ

Update: 2021-10-27 08:54 GMT

ತಿರುವನಂತಪುರಂ: ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದ ಇಬ್ಬರು ಪಾಕ್ ರಾಷ್ಟ್ರೀಯರ ವಿರುದ್ಧ ಅನಗತ್ಯವಾಗಿ ಪ್ರಕರಣ ದಾಖಲಿಸಿದ್ದಕ್ಕಾಗಿ ಪೊಲೀಸರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್‍ನ ಏಕ ಸದಸ್ಯ ಪೀಠ, ಇಬ್ಬರ ವಿರುದ್ಧ ವಿದೇಶೀಯರ ಕಾಯಿದೆ 1946 ಅನ್ವಯ ದಾಖಲಾಗಿದ್ದ ಎಫ್‍ಐಆರ್ ಅನ್ನು ರದ್ದುಗೊಳಿಸಿತಲ್ಲದೆ ಅವರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ನೀಡುವಂತೆಯೂ ಆದೇಶಿಸಿದೆ.

ವಿದೇಶೀಯರ ವಿರುದ್ಧ ಯಾವುದೇ ಪ್ರಕಣ ದಾಖಲಿಸುವುದರ ಮುನ್ನ ಅದಕ್ಕೆ ಸಾಕಷ್ಟು ಕಾರಣಗಳಿರಬೇಕು ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ವಿದೇಶೀಯರನ್ನೊಳಗೊಂಡ ಪ್ರಕರಣಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳು ಹೆಚ್ಚು ವಿವೇಚನೆಯಿಂದ ಮತ್ತು ಎಚ್ಚರಿಕೆಯಿಂದ ಮುಂದಡಿಯಿಡಬೇಕು. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾವುದೇ ಕಾರಣ ಇರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

"ಅರ್ಜಿದಾರರು ವೀಸಾ ನಿಯಮಗಳನ್ನು ಅಥವಾ ರೆಸಿಡೆನ್ಶಿಯಲ್ ಪರ್ಮಿಟ್‍ಗಳನ್ನು ಉಲ್ಲಂಘಿಸಿದ್ದಾರೆ ಅಥವಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿದ್ದಾರೆಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಸಾಕಷ್ಟು ಪರಾಮರ್ಶಿಸದೆ ಪ್ರಕರಣ ದಾಖಲಿಸಲಾಗದೆ. ಹೀಗೆ ಮಾಡುವುದರಿಂದ ಪೊಲೀಸರು  ಕಾನೂನು ಜಾರಿ ವ್ಯವಸ್ಥೆಗೆ ಅವಮಾನವುಂಟು ಮಾಡುತ್ತಾರೆ" ಎಂದು ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News