ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಅನ್ನು ಅಧಿಕಾರಿಗಳು ನಿಲ್ಲಿಸದಿದ್ದರೆ ನಾವೇ ನಿಲ್ಲಿಸುತ್ತೇವೆ: ಹಿಂದುತ್ವ ಸಂಘಟನೆ

Update: 2021-10-27 09:14 GMT

ಗುರುಗ್ರಾಮ: ಗುರುಗ್ರಾಮದಲ್ಲಿ ಶುಕ್ರವಾರಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಸಲ್ಲಿಸಲಾಗುವ ನಮಾಝ್ ಅನ್ನು ಸರಕಾರ ನಿಲ್ಲಿಸಲು ಕ್ರಮಕೈಗೊಳ್ಳದೇ ಇದ್ದರೆ ತಾನು ಮುಸ್ಲಿಮರಿಗೆ ನಮಾಝ್ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಹಿಂದುತ್ವ ಸಂಘಟನೆ ಸಂಯುಕ್ತ ಹಿಂದು ಸಂಘರ್ಷ ಸಮಿತಿ ಹೇಳಿದೆ.

ಸುಮಾರು 22 ಹಿಂದು ಸಂಘಟನೆಗಳನ್ನೊಳಗೊಂಡ ಈ ಸಮಿತಿಯ ಐದು ಮಂದಿ ಸದಸ್ಯರ ನಿಯೋಗ ಮಂಗಳವಾರ ಗುರುಗ್ರಾಮ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಕೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದೆ.

"ನಾವು ವಿನಯದಿಂದಲೇ ಎಚ್ಚರಿಕೆ ನೀಡಿದ್ದೇವೆ. ಇನ್ನು ಹೆಚ್ಚಿನ ಮನವಿಗಳನ್ನು ಸಲ್ಲಿಸುವುದಿಲ್ಲ, ಶಾಂತಿ ಕಾಪಾಡುವುದು ಆಡಳಿತದ ಕೆಲಸ, ನಮ್ಮದಲ್ಲ, ನಾವು ಲಾಠಿಗಳೊಂದಿಗೆ ಸಿದ್ಧರಾಗಿದ್ದೇವೆ, ನಾವು ಜೈಲಿಗೆ ಹೋಗಲು ಸಿದ್ಧ" ಎಂದು ಸಮಿತಿಯ ಹರ್ಯಾಣ ಘಟಕದ ಅಧ್ಯಕ್ಷ ಮಹಾವೀರ್ ಭಾರದ್ವಾಜ್ ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಸಲ್ಲಿಕೆ ವಿರೋಧಿಸಿ ಹಿಂದುತ್ವ ಸಂಘಟನೆಗಳು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಾ, ಮಂತ್ರಘೋಷಗಳನ್ನು ಉಚ್ಛಸ್ವರದಲ್ಲಿ ಹೇಳುತ್ತಿದ್ದ ವೀಡಿಯೊಗಳು ವೈರಲ್‌ ಆಗಿತ್ತು. ಕಳೆದ ಶುಕ್ರವಾರ ಕೂಡ ನಮಾಝ್ ಸಲ್ಲಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News