350 ಕೆ.ಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡಿದ ಅಲಹಾಬಾದ್‌ ಹೈಕೋರ್ಟ್‌

Update: 2021-10-28 08:09 GMT

ಅಲಹಾಬಾದ್:‌ ಸುಮಾರು ೩೫೦ಕೆ.ಜಿ ಪ್ರಮಾಣದ ಗಾಂಜಾ ಹೊಂದಿದ್ದ ವ್ಯಕ್ತಿಯನ್ನು 2019ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. ಇದೀಗ ಅಯೋಧ್ಯೆ ಮೂಲದ ಆರೋಪಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.

2019ರ ಜನವರಿಯಲ್ಲಿ ಎನ್ಡಿಪಿಎಸ್‌ ಕಾಯ್ದೆಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಅಯೋಧ್ಯೆ ನಿವಾಸಿ ಕಲೀಂ ಎಂಬಾತನಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಅವರು "ಸಂವಿಧಾನದ ೨೧ನೇ ವಿಧಿಯ ಆದೇಶದ ಪ್ರಕಾರ ಜಾಮೀನಿಗೆ ಸೂಕ್ತವಾದ ಪ್ರಕರಣ" ಹೊಂದಿದ್ದಾರೆ ಎಂದು ತೀರ್ಪು ನೀಡಿದೆ. 

ಅಯೋಧ್ಯೆ ಜಿಲ್ಲೆಯ ಎನ್‌ಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಎಫ್‌ಐಆರ್ ದಾಖಲಾಗಿದೆ. ಆರೋಪಿಯು ತನ್ನ ಜಾಮೀನು ಅರ್ಜಿಯಲ್ಲಿ, ದುರುದ್ದೇಶದಿಂದ ಮಾದಕ ವಸ್ತುವನ್ನು ಇರಿಸಲಾಗಿತ್ತು ಮತ್ತು ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದಾನೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸ್ವತಂತ್ರ ಸಾಕ್ಷಿಗಳಿಲ್ಲ ಎಂದೂ ಹೇಳಲಾಗಿದೆ. 

ಜಾಮೀನಿನ ಮೇಲೆ ಬಿಡುಗಡೆಯಾದರೆ, ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾನೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News