ಆಕ್ರಮಿತ ಪಶ್ಚಿಮ ದಂಡೆಯಲ್ಲಿ 3 ಸಾವಿರ ವಸತಿ ನಿರ್ಮಿಸಲಿರುವ ಇಸ್ರೇಲ್

Update: 2021-10-28 18:17 GMT

ಜೆರುಸಲೇಂ, ಅ.28: ಆಕ್ರಮಿತ ಪಶ್ಚಿಮ ದಂಡೆಯಲ್ಲಿ 1,344 ಮನೆಗಳನ್ನು ನಿರ್ಮಿಸಲು ಪೂರ್ವಭಾವಿ ಅನುಮತಿ ನೀಡಲಾಗಿದ್ದು ಇನ್ನೂ 1,800 ಆಶ್ರಯ ಮನೆಗಳ ನಿರ್ಮಾಣ ಯೋಜನೆ ಅಂತಿಮ ಹಂತದ ಅನುಮತಿ ಪ್ರಕ್ರಿಯೆಯಲ್ಲಿದೆ ಎಂದು ಇಸ್ರೇಲ್‌ನ ರಕ್ಷಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಯೋಜನೆಯ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಆಡಳಿತದ ತೀವ್ರ ಟೀಕೆಯನ್ನು ನಿರ್ಲಕ್ಷಿಸಿ ಇಸ್ರೇಲ್‌ನ ಅಧಿಕಾರಿಗಳು ಅಂಗೀಕಾರ ನೀಡಿದ್ದಾರೆ. ಇಸ್ರೇಲ್‌ನ ನಿರ್ಧಾರದ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ನಿರ್ಣಾಯಕ ನಿಲುವು ತಳೆಯಬೇಕು ಎಂದು ಪೆಲೆಸ್ತೀನಿಯನ್ ಅಥಾರಿಟಿ(ಪಿಎ) ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಕರೆ ನೀಡಿದ್ದಾರೆ.

ಆಕ್ರಮಿತ ಪ್ರದೇಶದಲ್ಲಿ ಜನರನ್ನು ನೆಲೆಗೊಳಿಸಲು ಇಸ್ರೇಲ್ 50 ವರ್ಷದಿಂದ ನಡೆಸುತ್ತಿರುವ ಕ್ರಮಗಳ ಮುಂದುವರಿದ ಭಾಗ ಇದಾಗಿದೆ. ಈ ಪ್ರದೇಶ ಪೆಲೆಸ್ತೀನ್‌ಗೆ ಸೇರಿದ್ದು ಎಂಬುದು ಪೆಲೆಸ್ತೀನೀಯರ ನಿಲುವಾಗಿದೆ. ಆಕ್ರಮಿತ ಪ್ರದೇಶದಲ್ಲಿ ಜನರನ್ನು ನೆಲೆಗೊಳಿಸುವುದು ಅಂತರಾಷ್ಟ್ರೀಯ ನಿಯಮದಡಿ ಕಾನೂನುಬಾಹಿರವಾಗಿದ್ದರೂ, ಇಸ್ರೇಲ್‌ನ ಉತ್ತರೋತ್ತರ(ಅನುಕ್ರಮ) ಸರಕಾರಗಳು ಈ ಕಾನೂನನ್ನು ಉಲ್ಲಂಘಿಸುತ್ತಲೇ ಬಂದಿವೆ ಮತ್ತು ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಪಡೆದಿರುವ ಎರಡು ರಾಷ್ಟ್ರಗಳ ಪರಿಹಾರ ಕ್ರಮ ಜಾರಿಗೆ ಬರಲು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಿಸಿದೆ.

ಆಕ್ರಮಿತ ಪ್ರದೇಶದಲ್ಲಿ ಮನೆ ನಿರ್ಮಿಸಲು ಅನುಮೋದನೆ ನೀಡಿರುವುದು ಯೆಹೂದಿ ಪ್ರಾಭಲ್ಯವಾದಿ ಸರಕಾರಗಳ ವಿಸ್ತರಣಾವಾದಿ ನೀತಿಗೆ ಉದಾಹರಣೆಯಾಗಿದೆ . ಇಸ್ರೇಲ್‌ನ ಪ್ರಯತ್ನಗಳನ್ನು ತಡೆಯಲು ಪೆಲೆಸ್ತೀನ್ ಅಥಾರಿಟಿ(ಪಿಎ) ಮತ್ತು ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮುಂದಾಗಬೇಕು ಎಂದು ಗಾಝಾ ಪಟ್ಟಿಯ ಒಂದು ಭಾಗದಲ್ಲಿ ನಿಯಂತ್ರಣ ಹೊಂದಿರುವ ಹಮಾಸ್ ಸಂಘಟನೆಯ ವ್ತಾರ ಹಸೀಮ್ ಖಾಸಿಂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News