ಸುಡಾನ್: ಕ್ಷಿಪ್ರಕ್ರಾಂತಿ ವಿರೋಧಿ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 7ಕ್ಕೆ

Update: 2021-10-28 17:19 GMT

ಖರ್ಟೌಮ್, ಅ.28: ಸುಡಾನ್‌ನಲ್ಲಿ 4 ದಿನದ ಹಿಂದೆ ನಡೆದ ಸೇನಾಕ್ಷಿಪ್ರ ಕ್ರಾಂತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 7ಕ್ಕೇರಿದೆ ಎಂದು ಸುಡಾನ್‌ನ ಆೋಗ್ಯ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಸೋಮವಾರ ಕ್ಷಿಪ್ರಕ್ರಾಂತಿ ನಡೆದ ಕೆಲವೇ ಗಂಟೆಗಳಲ್ಲಿ ಇದನ್ನು ವಿರೋಧಿಸಿ ಪ್ರತಿಭಟನೆ ಆರಂಭವಾಗಿತ್ತು. ಸೋಮವಾರ 11 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತದೇಹಗಳ ಮೇಲೆ ಹರಿತವಾದ ಆಯುಧದಿಂದ ಉಂಟಾದ ಆಳವಾದ ಗಾಯವಿತ್ತು ಎಂದು ಆರೋಗ್ಯ ಇಲಾಖೆಯ ಅಧೀನದಲ್ಲಿರುವ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಹಿಶಾಂ ಫಗಿರಿ ಹೇಳಿದ್ದಾರೆ.

ಈ ಮಧ್ಯೆ, ಸುಡಾನ್‌ನ ಸರಕಾರವನ್ನು ವಜಾಗೊಳಿಸಿ ಅಧಿಕಾರ ಕೈವಶ ಮಾಡಿಕೊಂಡ ಸೇನೆಯ ಕ್ರಮವನ್ನು ಖಂಡಿಸಿದ್ದ 6 ದೇಶಗಳಲ್ಲಿದ್ದ ಸುಡಾನ್ ರಾಯಭಾರಿಗಳನ್ನು ಸೇನಾ ಮುಖಂಡ ಜನರಲ್ ಅಬ್ದುಲ್ ಫತೇ ಬರಾನ್ ವಜಾಗೊಳಿಸಿದ್ದಾರೆ. ಅಮೆರಿಕ, ಫ್ರಾನ್ಸ್,ಖತರ್,ಯುರೋಪಿಯನ್ಯೂನಿಯನ್,  ಚೀನಾ ಮತ್ತು ವಿಶ್ವಸಂಸ್ಥೆಯಲ್ಲಿ ಸುಡಾನ್‌ನ ರಾಯಭಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News