ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಹೆಸರು ಬದಲಾವಣೆ: ಅಧಿಕೃತ ಘೋಷಣೆ

Update: 2021-10-29 05:51 GMT
Photo: Times magazine

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ತಾಣ ದೈತ್ಯ ಸಂಸ್ಥೆಯಾದ ಫೇಸ್‌ ಬುಕ್‌ ತನ್ನ ಹೆಸರನ್ನು ಬದಲಾಯಿಸಿದೆ. ಹಗರಣ ಪೀಡಿತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅನ್ನು ಭವಿಷ್ಯದ ವರ್ಚುವಲ್‌ ರಿಯಾಲಿಟಿಯ ದೃಷ್ಟಿಯಲ್ಲಿ ನವೀಕರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಫೇಸ್‌ಬುಕ್‌ ಹೆಸರಿನಿಂದ ʼಮೆಟಾʼ ಎಂಬ ಹೆಸರಿಗೆ ಸಂಸ್ಥೆ ಮರುನಾಮಕರಣ ಮಾಡಿದೆ. ಈ ಕುರಿತು ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಅಧಿಕೃತ ಘೋಷಣೆ ಮಾಡಿದ್ದಾರೆ.

ಹೆಸರು ಬದಲಾವಣೆಯೊಂದಿಗೆ ಇದು ಭೌತಿಕ ಪ್ರಪಂಚ ಮತ್ತು ಡಿಜಿಟಲ್‌ ಜಗತ್ತು ನಡುವಿನ ರೇಖೆಗಳನ್ನು ಮಸುಕುಗೊಳಿಸುತ್ತದೆ ಎಂದೂ ಸಂಸ್ಥೆ ತಿಳಿಸಿದೆ. "ನಾವು ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವುದರಿಂದ ಮುಚ್ಚಲ್ಪಟ್ಟ ವೇದಿಕೆಗಳಲ್ಲಿ ಬದುಕುವುದನ್ನು ಕಲಿತಿದ್ದೇವೆ. ನಾವು ಇದುವರೆಗೆ ಕಲಿತ ಎಲ್ಲ ವಿಚಾರಗಳನ್ನು ಪಡೆದುಕೊಂಡು ಮುಂದಿನ ಅಧ್ಯಾಯ ನಿರ್ಮಿಸಲು ಸಹಾಯ ಮಾಡುವ ಸಮಯ ಬಂದಿದೆ" ಎಂದು ವಾರ್ಷಿಕ ಡೆವಲಪರ್‌ಗಳ ಸಮ್ಮೇಳನದಲ್ಲಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. 

"ಇಂದಿನಿಂದ ನಮ್ಮ ಸಂಸ್ಥೆಯು ʼಮೆಟಾʼ ಆಗಿದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಎಲ್ಲ ಜನರನ್ನೂ ಒಂದೇ ವೇದಿಕೆಯಡಿಯಲ್ಲಿ ಒಂದಾಗಿಸುವುದು ನಮ್ಮ ಧ್ಯೇಯವಾಗಿದೆ. ಜನರನ್ನು ಒಂದುಗೂಡಿಸುವ ವಿಚಾರದಲ್ಲಿ ನಮ್ಮ ಎಲ್ಲ ಆಪ್‌ ಗಳು ಬ್ರಾಂಡ್‌ ಗಳು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News