‌ಆಹಾರ ಅಭಾವ: 2025ರವರೆಗೆ ಕಡಿಮೆ ತಿನ್ನುವಂತೆ ಉತ್ತರಕೊರಿಯಾ ನಾಗರಿಕರಿಗೆ ಸಲಹೆ ನೀಡಿದ ಕಿಮ್‌ ಜಾಂಗ್‌ ಉನ್

Update: 2021-10-29 06:14 GMT

ದೇಶವನ್ನು ಕಾಡುತ್ತಿರುವ ಆಹಾರ ಅಭಾವದ ವಿರುದ್ಧ ಹೋರಾಡುವ ಸಲುವಾಗಿ ತನ್ನ ನಾಗರಿಕರಿಗೆ 2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸರಿಯಾದ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಆಮದಾಗದ ಕಾರಣದಿಂದ ದೇಶದಾದ್ಯಂತ ತೀವ್ರ ಆಹಾರದ ಅಭಾವ ಎದುರಾಗಿದ್ದು, ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ.

ಆಹಾರ ಪದಾರ್ಥಗಳ ಅಸಮರ್ಪಕ ಪೂರೈಕೆಗೆ ʼವ್ಯತ್ಯಾಸಗಳ ಸರಣಿʼಯನ್ನು ದೂರಿದ ಅವರು, "ದೇಶದ ಕೃಷಿ ವಲಯವು ಜನರ ಅಗತ್ಯಗಳಿಗೆ ಅನುಸಾರವಾಗಿ ಆಹಾರ ಪದಾರ್ಥಗಳನ್ನು ಪೂರೈಸಲು ವಿಫಲವಾಗಿರುವ ಕಾರಣ ದೇಶದಾದ್ಯಂತ ಆತಂಕದ ಪರಿಸ್ಥಿತಿ ಎದುರಾಗಿದೆ" ಎಂದು ಕಿಮ್‌ ಜಾಂಗ್‌ ಉನ್‌ ಹೇಳಿಕೆ ನೀಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಜೊತೆಗೆ ಭಾರೀ ಪ್ರಮಾಣದ ಚಂಡಮಾರುತ ಮತ್ತು ಪ್ರವಾಹದ ಕಾರಣದಿಂದ ಉತ್ತರ ಕೊರಿಯಾ ಸದ್ಯ ಬಿಕ್ಕಟ್ಟು ಎದುರಿಸುತ್ತಿದೆ. ಉತ್ತರ ಕೊರಿಯಾ ಮತ್ತು ಚೀನಾದ ನಡುವಿನ ಬಿಕ್ಕಟ್ಟು ೨೦೨೫ರವರೆಗೆ ಸರಿಯಾಗುವ ಯಾವುದೇ ಲಕ್ಷಣಗಳಿಲ್ಲದ ಕಾರಣ ಅಲ್ಲಿಯವರೆಗೆ ಕಡಿಮೆ ಆಹಾರ ಸೇವಿಸುವಂತೆ ಜನರಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News