ಗುರುಗ್ರಾಮ: ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸಿದ 30 ಮಂದಿ ಪೊಲೀಸ್ ವಶಕ್ಕೆ
ಹೊಸದಿಲ್ಲಿ: ಗುರುಗ್ರಾಮದ ಸೆಕ್ಟರ್ 12-ಎ ಸ್ಥಳದಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುತ್ತಿರುವುದನ್ನು ವಿರೋಧಿಸಿ ಇಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ ಸುಮಾರು 30 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಹಲವು ವಾರಗಳಿಂದ ಸ್ಥಳೀಯ ಕೆಲ ನಿವಾಸಿಗಳು ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಸಲ್ಲಿಕೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇಂದು ಪೊಲೀಸರು ಕ್ಷಿಪ್ರ ಕ್ರಮಕೈಗೊಂಡು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಮಾಝ್ ಸಲ್ಲಿಕೆಗೆ 37 ಸ್ಥಳಗಳನ್ನು ಗುರುತಿಸಲಾಗಿದೆ ಅಲ್ಲಿ ನಮಾಝ್ ಸಲ್ಲಿಸುವವರಿಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು ಎಂದು ಗುರುಗ್ರಾಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿತಾ ಚೌಧುರಿ ಹೇಳಿದ್ದಾರೆ.
ಇಂದಿನ ಘಟನೆಯ ವೀಡಿಯೋದಲ್ಲಿ ಜನರ ಒಂದು ಸಣ್ಣ ಗುಂಪು, ಕೈಯ್ಯಲ್ಲಿ ಪೋಸ್ಟರುಗಳನ್ನು ಹಿಡಿದುಕೊಂಡು `ಬಂದ್ ಕರೋ' ಬಂದ್ ಕರೋ' ಎಂದು ಘೋಷಣೆ ಕೂಗುತ್ತಿರುವುದು ಕಾಣಿಸುತ್ತದೆ.
ಗುರುಗ್ರಾಮದ ಆಡಳಿತವು ನಮಾಝ್ ಸಲ್ಲಿಕೆಗೆ ಗುರುತಿಸಿದ 37 ಸ್ಥಳಗಳಲ್ಲಿ ಸೆಕ್ಟರ್ 47 ಹಾಗೂ ಸೆಕ್ಟರ್ 1-ಎ ಕೂಡ ಸೇರಿವೆ.