ಅಮೆರಿಕ: ಡಿಯರ್ಬಾರ್ನ್ ನಗರದ ಮೇಯರ್ ಆಗಿ ಅರಬ್ ಮೂಲದ ಹಮ್ಮೂದ್ ಆಯ್ಕೆಯ ನಿರೀಕ್ಷೆ

Update: 2021-10-30 16:15 GMT
photo:twitter/
@TheNationalNews

ನ್ಯೂಯಾರ್ಕ್, ಅ.30: ಅಮೆರಿಕದ ಮಿಷಗನ್ ರಾಜ್ಯದ ಡಿಯರ್‌ಬಾರ್ನ್ ನಗರದ ಮೇಯರ್ ಹುದ್ದೆಗೆ ಮೊದಲ ಬಾರಿಗೆ ಅರಬ್- ಅಮೆರಿಕನ್ ವ್ಯಕ್ತಿಯೊಬ್ಬರು ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಡೆಟ್ರಾಯ್ಟಾನ ಉಪನಗರವಾಗಿರುವ ಡಿಯರ್‌ಬಾರ್ನ್ ನಗರ ‘ಅರಬ್ ಅಮೆರಿಕದ ರಾಜಧಾನಿ’ ಎಂದು ಹೆಸರಾಗಿದೆ. ಮಂಗಳವಾರ ಮೇಯರ್ ಹುದ್ದೆಗೆ ಚುನಾವಣೆ ನಡೆಯಲಿದ್ದು ಕಣದಲ್ಲಿರುವ ಲೆಬನಾನ್ ಮೂಲದ ಅಮೆರಿಕನ್ ಅಬ್ದುಲ್ಲಾ ಹಮ್ಮೂದ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಮಿಷಗನ್ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನ ಸದಸ್ಯರಾಗಿರುವ ಹಮ್ಮೂದ್ ಚುನಾವಣೆಯಲ್ಲಿ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದ್ದು, ಈ ಗೆಲುವು ತಮ್ಮ ಸಮುದಾಯದ ಅಭಿವೃದ್ಧಿ ಮತ್ತು ರಾಜಕೀಯ ಶಕ್ತಿಯ ಸಂಕೇತವಾಗಲಿದೆ ಎಂದು ಅರಬ್- ಅವೆುರಿಕನ್ ಕಾರ್ಯಕರ್ತರು ಹೇಳಿದ್ದಾರೆ.

ಹಮ್ಮೂದ್‌ಗೆ ಸ್ಥಳೀಯ ಹಿರಿಯ ರಾಜಕಾರಣಿ ಗ್ಯಾರಿ ವೊರೊನ್‌ಚಾಕ್‌ರಿಂದ ನಿಕಟ ಸ್ಪರ್ಧೆ ಎದುರಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವ್ಯಾವಹಾರಿಕ ಪ್ರಗತಿಪರ ಎಂದು ತನ್ನನ್ನು ಕರೆಸಿಕೊಳ್ಳುವ ಹಮ್ಮೂದ್ ಡೆಮೊಕ್ರಾಟ್ ಸದಸ್ಯ. ಆದರೆ ಮೇಯರ್ ಚುನಾವಣೆ ಪಕ್ಷರಹಿತವಾಗಿ ನಡೆಯುತ್ತದೆ. ತನ್ನ ರಾಜಕೀಯ ಚಿಂತನೆ, ಅರಬ್ ಪರಂಪರೆ ಅಥವಾ ಮುಸ್ಲಿಂ ಧರ್ಮದಲ್ಲಿರುವ ನಂಬಿಕೆಯ ಬಗ್ಗೆ ಯಾರಿಗಾದರೂ ಭಿನ್ನಾಭಿಪ್ರಾಯವಿದ್ದರೆ ಈ ಬಗ್ಗೆ ಪರಸ್ಪರ ಮಾತನಾಡುವಾ, ಮುಸ್ಲಿಮರ ಬಗ್ಗೆ ಅಥವಾ ಅರಬ್ ಅಮೆರಿಕನ್ನರ ಬಗ್ಗೆ ನಿಮಗೆ ಕೆಲವೊಂದು ನಕಾರಾತ್ಮಕ ಗ್ರಹಿಕೆಗಳಿದ್ದರೆ ನನ್ನನ್ನು ಕೇಳಿ, ಸ್ಪಷ್ಟಪಡಿಸುತ್ತೇನೆ ಎಂದು ಅವರು ಮತದಾರರಿಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News