ಡಮಾಸ್ಕಸ್ ಗುರಿಯಾಗಿಸಿ ವಿಧ್ವಂಸಕ ದಾಳಿ ಸಿರಿಯಾ ಸರಕಾರದ ಹೇಳಿಕೆ

Update: 2021-10-30 16:32 GMT

ಡಮಾಸ್ಕಸ್, ಅ.30: ಆಕ್ರಮಿತ ಪ್ರದೇಶದಿಂದ ಡಮಾಸ್ಕಸ್ ಪ್ರದೇಶವನ್ನು ಗುರಿಯಾಗಿಸಿ ಉಡಾಯಿಸಿದ ಪ್ರತಿಕೂಲ ವಸ್ತುಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ನಿರ್ಬಂಧಿಸಿದೆ ಎಂದು ಸಿರಿಯಾದ ಸರಕಾರಿ ಸ್ವಾಮ್ಯ ಟಿವಿ ವಾಹಿನಿ ಶನಿವಾರ ವರದಿ ಮಾಡಿದೆ.

ಡಮಾಸ್ಕಸ್ ನಗರದ ಹೊರವಲಯದಲ್ಲಿ ಸ್ಫೋಟದ ಸದ್ದು ಕೇಳಿಸಿದೆ ಎಂದು ಇದನ್ನೂ ಮುನ್ನ ಟಿವಿ ವಾಹಿನಿ ಸುದ್ಧಿ ಪ್ರಸಾರ ಮಾಡಿತ್ತು. ಆಕ್ರಮಿತ ಪ್ರದೇಶವೆಂದರೆ ಯಾವುದು ಎಂದು ಟಿವಿ ವಾಹಿನಿ ಸ್ಪಷ್ಟಪಡಿಸಿಲ್ಲ.

ಆದರೆ ಸಿರಿಯಾದಲ್ಲಿ ಇರಾನ್‌ನ ಸೇನೆಯ ಉಪಸ್ಥಿತಿ ಹೆಚ್ಚಿರುವುದನ್ನು ಮನಗಂಡು, ಇರಾನ್ ಸೇನೆಯ ಚಲನವಲನದ ಗತಿಯನ್ನು ನಿಯಂತ್ರಿಸಲು ಸಿರಿಯಾದ ಮೇಲೆ ಹಲವು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಇತ್ತೀಚೆಗೆ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News