ಅಯೋಧ್ಯೆ: ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ, ಸೂಸೈಡ್ ನೋಟ್ ನಲ್ಲಿ ಇಬ್ಬರು ಪೊಲೀಸರ ಮೇಲೆ ಆರೋಪ

Update: 2021-10-31 06:21 GMT

ಅಯೋಧ್ಯೆ: ಫೈಝಾಬಾದ್‌ನ ಸಹಂಗಂಜ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ 32 ವರ್ಷದ ಡೆಪ್ಯುಟಿ ಮ್ಯಾನೇಜರ್ ಶನಿವಾರ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸೂಸೈಡ್ ನೋಟ್ ನಲ್ಲಿ ತನ್ನ ಸಾವಿಗೆ  ಇಬ್ಬರು ಪೊಲೀಸ್ ಅಧಿಕಾರಿಗಳೇ  ಕಾರಣ ಎಂದು  ದೂಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆಯ ಕುಟುಂಬದವರು  ಸೂಸೈಡ್ ನೋಟ್ ನಲ್ಲಿ ಹೆಸರಿಲಾಗಿರುವ ಮೂವರ ವಿರುದ್ಧ ಅಯೋಧ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಶ್ ಪಾಂಡೆ ಹೇಳಿದ್ದಾರೆ.

ಪೊಲೀಸರ ಪ್ರಕಾರ ಶ್ರದ್ಧಾ ಗುಪ್ತಾ 2015 ರಲ್ಲಿ ಕ್ಲರ್ಕ್ ಆಗಿ ಬ್ಯಾಂಕಿಗೆ ಸೇರಿದ್ದರು ಹಾಗೂ ಅವರು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಬಡ್ತಿ ಪಡೆದಿದ್ದರು. ಅವರನ್ನು 2018 ರಿಂದ ಫೈಝಾಬಾದ್‌ನಲ್ಲಿ ನಿಯೋಜಿಸಲಾಗಿದೆ.

ಅವಿವಾಹಿತರಾಗಿರುವ ಗುಪ್ತಾ ಅವರು ಲಕ್ನೋದ ರಾಜಾಜಿಪುರಂ ಪ್ರದೇಶದವರಾಗಿದ್ದು ಕೆಲವೊಮ್ಮೆ ಅವರ ಕುಟುಂಬವನ್ನು ಭೇಟಿಯಾಗುತ್ತಿದ್ದರು ಎಂದು ಅವರು ಹೇಳಿದರು.

ಇಂದು ಬೆಳಗ್ಗೆ ಹಾಲು  ಮಾರಾಟಗಾರ ಗುಪ್ತಾ ಅವರ ಕೊಠಡಿಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಗ ಅವರು ಗುಪ್ತಾ ಅವರ ಮನೆ ಮಾಲಿಕರಿಗೆ ತಿಳಿಸಿದರು.

ಮಹಿಳೆ ಬಾಗಿಲು ತೆರೆಯದಿದ್ದಾಗ ಪಕ್ಕದ ಕಿಟಕಿಯಿಂದ ಇಣುಕಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಮಹಿಳೆಯ ಆತ್ಮಹತ್ಯೆ ಪತ್ರ ಎಂದು ಹೇಳಲಾದ ಟಿಪ್ಪಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಅವರು ಪೊಲೀಸ್ ಅಧಿಕಾರಿ, ಕಾನ್‌ಸ್ಟೆಬಲ್ ಹಾಗೂ  ಇನ್ನೊಬ್ಬ ವ್ಯಕ್ತಿಯನ್ನು ದೂಷಿಸಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News