×
Ad

ಹ್ಯಾಲೊವೀನ್ ಕೂಟದಲ್ಲಿ ಗುಂಡಿನ ದಾಳಿ ಒಬ್ಬ ಮೃತ್ಯು, 9 ಮಂದಿಗೆ ಗಾಯ

Update: 2021-10-31 21:51 IST

ಟೆಕ್ಸಾಸ್, ಅ.31: ಪೂರ್ವ ಟೆಕ್ಸಾಸ್‌ನಲ್ಲಿ ಹ್ಯಾಲೊವೀನ್  ಪಾರ್ಟಿ(ಔತಣಕೂಟ)ದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 9 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾೆ.

ಟೆಕ್ಸಾರ್‌ಕಾನ ಎಂಬಲ್ಲಿನ ಸಭಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಹ್ಯಾಲೊವೀನ್  ಪಾರ್ಟಿಯಲ್ಲಿ ಈ ದುರ್ಘಟನೆ ನಡೆದಿದೆ. ಸುಮಾರು 200 ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಏಕಾಏಕಿ ಗುಂಡಿನ ದಾಳಿ ನಡೆದಿದ್ದು ಜನ ಗಾಭರಿಯಿಂದ ಚೆಲ್ಲಾಪಿಲ್ಲಿಯಾದರು. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ 10 ಮಂದಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ 20 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹ್ಯಾಲೊವೀನ್  ದಿನ ಅಥವಾ ‘ಎಲ್ಲಾ ಸಂತರ ದಿನ’ವೆಂದು ಅಕ್ಟೋಬರ್ 31ರ ರಾತ್ರಿ ಹಾ್ಯಲೊವಿನ್ ಪಾರ್ಟಿ ಆಯೋಜಿಸಲಾಗುತ್ತದೆ.

ಗುಂಡು ಹಾರಿಸಿದ್ದ ಶಂಕಿತ ವ್ಯಕ್ತಿ ತಕ್ಷಣ ವಾಹನವೊಂದರಲ್ಲಿ ಅಲ್ಲಿಂದ ಪರಾರಿಯಾಗಿದ್ದು ಈತನ ಪತ್ತೆಗೆ ಕಾರ್ಯಾಚರಣೆ ನಡೆಯುತಿ್ತದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News