×
Ad

ಐಸಿಸ್-ಕೆ ಬಣಕ್ಕೆ ಸೇರ್ಪಡೆಗೊಂಡ ಅಫ್ಘಾನ್‌ ನ ಮಾಜಿ ಗುಪ್ತಚರ ಅಧಿಕಾರಿಗಳು: ವರದಿ

Update: 2021-11-01 22:38 IST
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ನ.1: ಅಫ್ಘಾನ್‌ನ ಈ ಹಿಂದಿನ ಸರಕಾರದ ಗುಪ್ತಚರ ಇಲಾಖೆಯ ಸದಸ್ಯರು ಈಗ ತಾಲಿಬಾನ್‌ಗಳ ವಿರೋಧಿ ಪಡೆ ಐಸಿಸ್-ಕೆ ಬಣವನ್ನು ಸೇರ್ಪಡೆಗೊಂಡಿದ್ದು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ.

ಇವರು ಅಫ್ಘಾನಿಸ್ತಾನದ ಭದ್ರತಾ ದಳ ಹಾಗೂ ಗುಪ್ತಚರ ದಳದ ಮಾಜಿ ಸಿಬಂದಿಗಳಾಗಿದ್ದು ಇವರಿಗೆ ಅಮೆರಿಕದಲ್ಲಿ ತರಬೇತಿ ನೀಡಲಾಗಿತ್ತು. ಅಫ್ಘಾನ್‌ನಲ್ಲಿ ತಾಲಿಬಾನ್‌ಗಳ ಕೈಮೇಲಾದ ಬಳಿಕ ಇವರೆಲ್ಲಾ ಉತ್ತರಪ್ರಾಂತದಲ್ಲಿ ಸಕ್ರಿಯವಾಗಿರುವ ಐಸಿಸ್-ಕೆ ಉಗ್ರರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ. ಸರಕಾರ ಪತನಗೊಂಡ ಬಳಿಕ ಆದಾಯ ಮೂಲವನ್ನು ಕಂಡುಕೊಳ್ಳುವುದು ಹಾಗೂ ತಾಲಿಬಾನ್ ವಿರುದ್ಧದ ಹೋರಾಟವನ್ನು ಮುಂದುವರಿಸುವುದು ಇವರ ಉದ್ದೇಶವಾಗಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

ಅಫ್ಘಾನ್‌ನಲ್ಲಿ ತಾಲಿಬಾನ್ ನೇತೃತ್ವದ ಸರಕಾರ ರಚನೆಯಾದ ಬಳಿಕ ಅಲ್ಲಿ ಬಾಂಬ್ ದಾಳಿ ಹಾಗೂ ಉದ್ದೇಶಿತ ಹತ್ಯೆ ಪ್ರಕರಣ ಹೆಚ್ಚಾಗಿದೆ. ಅದರಲ್ಲೂ ನಂಗರ್ಹಾರ್ ಪ್ರಾಂತದಲ್ಲಿ ಹಲವು ಭೀಕರ ಬಾಂಬ್‌ದಾಳಿ ನಡೆದಿದ್ದು ಇದರ ಹೊಣೆಯನ್ನು ಐಸಿಸ್ ಮತ್ತು ದಯೇಶ್ ಸಂಘಟನೆ ವಹಿಸಿಕೊಂಡಿದೆ. ಈ ಮಧ್ಯೆ, ಐಸಿಸ್‌ನ ಸುಮಾರು 65 ಸದಸ್ಯರು ಶರಣಾಗಿರುವುದಾಗಿ ತಾಲಿಬಾನ್ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News