×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ:ಅನಿಲ್ ದೇಶಮುಖ್ ಶನಿವಾರದವರೆಗೆ ಈಡಿ ಕಸ್ಟಡಿಗೆ

Update: 2021-11-02 17:06 IST

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ನವೆಂಬರ್ 6 ರವರೆಗೆ ಜಾರಿ ನಿರ್ದೇಶನಾಲಯದ (ಈಡಿ) ಕಸ್ಟಡಿಗೆ ವಿಶೇಷ ರಜಾದಿನದ ನ್ಯಾಯಾಲಯ ಮಂಗಳವಾರ ಒಪ್ಪಿಸಿದೆ.

ದೇಶ್ ಮುಖ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಹಾಗೂ  ಮಧ್ಯಾಹ್ನ 12.30 ಕ್ಕೆ ರಿಮಾಂಡ್ ಮನವಿಯ ವಾದಗಳು ಪ್ರಾರಂಭವಾದವು, ಎಎಸ್ಜಿ ಅನಿಲ್ ಸಿಂಗ್ ಅವರು 14 ದಿನಗಳ ಕಸ್ಟಡಿಗೆ ಕೋರಿದರು.

ಸೋಮವಾರ ಮಧ್ಯಾಹ್ನ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಈಡಿ ಕಚೇರಿಗೆ ಆಗಮಿಸಿದ ಕೆಲವೇ ಗಂಟೆಗಳ ಬಳಿಕ ಮಧ್ಯರಾತ್ರಿಯ ನಂತರ ದೇಶಮುಖ್ ಅವರನ್ನು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News