ಕೊರೋನ ಸೋಂಕು: ನ್ಯೂಝಿಲ್ಯಾಂಡ್ ನ ಉತ್ತರ ವಲಯದಲ್ಲಿ ಲಾಕ್‌ಡೌನ್ ಜಾರಿ

Update: 2021-11-02 17:59 GMT

ವೆಲ್ಲಿಂಗ್ಟನ್, ನ.2: ಕೊರೋನ ಸೋಂಕು ಸಮುದಾಯಕ್ಕೆ ಹಬ್ಬಿರುವ ಸಾಧ್ಯತೆಯಿರುವುದರಿಂದ ನ್ಯೂಝಿಲ್ಯಾಂಡ್‌ನ ಉತ್ತರವಲಯದ ಹಲವೆಡೆ ಲಾಕ್‌ಡೌನ್ ಜಾರಿಗೊಳಿಸಲು ಹಾಗೂ ಸೋಂಕು ತೀವ್ರವಾಗಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಕ್ಲಂಡ್ ನಗರದ ಸುಮಾರು 270 ಕಿ.ಮೀ ದೂರದಲ್ಲಿರುವ ನಾರ್ಥ್‌ಲ್ಯಾಂಡ್ ವಲಯದ ಕೆಲಚು ಭಾಗಗಳಲ್ಲಿ 3ನೇ ಹಂತದ ಲಾಕ್‌ಡೌನ್ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೊಳ್ಳಲಿದೆ ಎಂದು ಕೊರೋನ ನಿಯಂತ್ರಣ ಕಾರ್ಯಕ್ರಮದ ಸಂಯೋಜಕರಾಗಿರುವ ಸಚಿವ ಕ್ರಿಸ್ ಹಿಪ್ಕಿನ್ಸ್ ಹೇಳಿದ್ದಾರೆ. ಈ ವಲಯದಲ್ಲಿ ಪತ್ತೆಯಾಗಿರುವ 2 ಪ್ರಕರಣಗಳು ಇದುವರೆಗೆ ಪತ್ತೆಯಾಗಿರುವ ಯಾವುದೇ ಪ್ರಕರಣಕ್ಕೆ ಸಂಬಂಧಿಸಿಲ್ಲ.

ಈ ವ್ಯಕ್ತಿಗಳಿಗೆ ಸೋಂಕು ಹೇಗೆ ತಗುಲಿದೆ ಎಂಬ ಮಾಹಿತಿಯಿಲ್ಲ. ಆದ್ದರಿಂದ ನಾರ್ಥ್‌ಲ್ಯಾಂಡ್ ವಲಯದಲ್ಲಿ ಸಮುದಾಯ ಮಟ್ಟದಲ್ಲಿ ಪತ್ತೆಯಾಗದ ಹಲವು ಸೋಂಕು ಪ್ರಕರಣಗಳಿರುವ ಸಾಧ್ಯತೆಯಿದೆ ಎಂದು ಹಿಪ್ಕಿನ್ಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಈ ವಲಯದ ಜನಸಂಖ್ಯೆಯಲ್ಲಿ ಕೊರೋನದ ಪೂರ್ಣಪ್ರಮಾಣದ ಲಸಿಕೆ ಪಡೆದವರ ಪ್ರಮಾಣ ಕೇವಲ 64% ಮಾತ್ರವಾಗಿದ್ದು ವಲಯವನ್ನು ಸೀಲ್‌ಡೌನ್ ಮಾಡುವ ನಿರ್ಧಾರವನ್ನು ಸಚಿವ ಸಂಪುಟ ಪರಿಶೀಲಿಸಲಿದೆ ಎಂದು ಮೂಲಗಳು ಹೇಳಿವೆ.

ಆಕ್ಲಂಡಿನಲ್ಲಿ ಕೊರೋನಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ವುತ್ತೊಂದು ವಾರಕ್ಕೆ ವಿಸ್ತರಿಸಲಾಗಿದೆ.

ಕಳೆದ ವರ್ಷ ಕೊರೋನ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮದಿಂದಾಗಿ ನ್ಯೂಝಿಲ್ಯಾಂಡ್ ಜಾಗತಿಕ ಶ್ಲಾಘನೆಗೆ ಪಾತ್ರವಾಗಿತ್ತು. ಆದರೆ ಈಗ ಉಲ್ಬಣಗೊಂಡಿರುವ ಡೆಲ್ಟಾ ರೂಪಾಂತರಿತ ಸೋಂಕಿನ ನಿರ್ಮೂಲನೆ ಕಷ್ಟಸಾಧ್ಯವಾದ್ದರಿಂದ , ಸೋಂಕಿನ ಜತೆಗೇ ಜೀವಿಸುವ ನಿರ್ಧಾರಕ್ಕೆ ಬರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News