×
Ad

ಉದ್ಯಮಿಗಾಗಲಿ, ರೈತರಾಗಲಿ ಎಲ್ಲರೂ ಕೇಂದ್ರ ಸರಕಾರದ ನೀತಿಯ ಸಂತ್ರಸ್ತರು: ರಾಹುಲ್ ಗಾಂಧಿ

Update: 2021-11-03 22:41 IST

ಹೊಸದಿಲ್ಲಿ, ನ. 2: 2020ರಲ್ಲಿ ರೈತರಿಗಿಂತ ಉದ್ಯಮಿಗಳೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದ ಮಾಧ್ಯಮ ವರದಿ ಕುರಿತಂತೆ ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಬ್ಬರೂ ಕೇಂದ್ರ ಸರಕಾರದ ‘‘ಕೆಟ್ಟ ನೀತಿಗಳ’’ ಸಂತ್ರಸ್ತರು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2020ರಲ್ಲಿ ಭಾರತದ ಕನಿಷ್ಠ 11,716 ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಅವಧಿಯಲ್ಲಿ 10,677 ಮಂದಿ ರೈತರು ಆತ್ಮಹತ್ಯೆಗೈದಿದ್ದಾರೆ. ರೈತರಿಗಿಂತ ಹೆಚ್ಚು ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊದ ವರದಿ ಆದರಿಸಿದ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ.

 ಭಾರತ ಸರಕಾರದ ಕೆಟ್ಟ ನೀತಿಗೆ ಉದ್ಯಮಿಗಳಾಗಲಿ, ರೈತರಾಗಲಿ- ಇಬ್ಬರೂ ಸಂತ್ರಸ್ತರೇ. ಆರ್ಥಿಕತೆಯನ್ನು ಸರಿಪಡಿಸಿ ಜೀವ ರಕ್ಷಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಬಗ್ಗೆ ಟೀಕಿಸಿದೆ. ಎಂಎಸ್‌ಎಂಇಗಳು ಹಾಗೂ ಇತರ ಉದ್ಯಮಗಳ ಸ್ಥಿತಿಯ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News