ವಿಶ್ವಕಪ್: ಭಾರತ ವಿರುದ್ಧ ನಮೀಬಿಯ 132/8

Update: 2021-11-08 15:45 GMT
photo: AFP

ದುಬೈ: ಸ್ಪಿನ್ನರ್ ಗಳಾದ ರವೀಂದ್ರ ಜಡೇಜ(3-16) ಹಾಗೂ ಆರ್.ಅಶ್ವಿನ್(3-20), ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ(2-19) ಅವರ ಸೊಗಸಾದ ಬೌಲಿಂಗ್ ನೆರವಿನಿಂದ ಭಾರತವು ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12ರ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ನಮೀಬಿಯವನ್ನು8 ವಿಕೆಟ್ ಗಳ ನಷ್ಟಕ್ಕೆ 132 ರನ್ ಗೆ ನಿಯಂತ್ರಿಸಿದೆ.

ಟಾಸ್ ಗೆದ್ದ ವಿರಾಟ್ ಕೊಹ್ಲಿ ನಮೀಬಿಯವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು.

ನಿರಂತರವಾಗಿ ವಿಕೆಟ್ ಗಳನ್ನು ಕೈಚೆಲ್ಲಿದ ನಮೀಬಿಯದ ಪರ ಡೇವಿಡ್ ವೈಸ್ ಗರಿಷ್ಟ ಸ್ಕೋರ್(26, 25 ಎಸೆತ) ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ಸ್ಟಿಫನ್ ಬಾರ್ಡ್(21), ಮೈಕಲ್ ಲಿಂಜೆನ್(14) , ಗೆರ್ಹಾರ್ಡ್ ಎರಸ್ಮಸ್(12) ಜಾನ್ ಫ್ರೈಲಿಂಕ್(ಔಟಾಗದೆ 15) ಹಾಗೂ ರುಬೆನ್(ಔಟಾಗದೆ 12) ಎರಡಂಕೆಯ ಸ್ಕೋರ್ ಗಳಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News