ನನಗೆ ನ್ಯಾಯ ಬೇಕು:ಉತ್ತರ ಪ್ರದೇಶದ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಯುವಕನ ತಂದೆಯ ಅಳಲು

Update: 2021-11-11 17:31 GMT

ಕಾಸ್‌ಗಂಜ್: ಉತ್ತರ ಪ್ರದೇಶದ ಕಾಸ್‌ಗಂಜ್‌ನ ಪೊಲೀಸ್ ಕಸ್ಟಡಿಯೊಂದರಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ 22 ವರ್ಷದ ಯುವಕನ ತಂದೆ ತನ್ನ ಹೆಬ್ಬೆರಳು ಗುರುತಿನೊಂದಿಗೆ ಸಹಿ ಮಾಡಲಾದ ಪತ್ರದಲ್ಲಿರುವ  ವಿಷಯಗಳನ್ನು ಅಲ್ಲಗಳೆದಿದ್ದಾರೆ.

ಪತ್ರದಲ್ಲಿ ಉತ್ತರಪ್ರದೇಶ ಪೊಲೀಸರಿಗೆ ಯಾವುದೇ ತಪ್ಪಿನಿಂದ ಮುಕ್ತಿ ನೀಡುವಂತೆ ಕೋರುವಂತೆ ಕಾಣುತ್ತಿದೆ. ತನ್ನ  22 ವರ್ಷ ವಯಸ್ಸಿನ ಮಗ  "ಖಿನ್ನತೆ" ಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪತ್ರ ಹರಿದಾಡಿದ್ದು, ಇದನ್ನು ಯಾರು ಬಿಡುಗಡೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

"ನಾನು ಅನಕ್ಷರಸ್ಥ. ಪತ್ರದಲ್ಲಿರುವ ವಿಷಯಗಳು ಏನೆಂದು ನನಗೆ ತಿಳಿದಿರಲಿಲ್ಲ. ಸಿಒ (ಉತ್ತರಪ್ರದೇಶ ಪೋಲಿಸ್ ನ  ಸರ್ಕಲ್ ಆಫೀಸರ್) ಒತ್ತಾಯದ ಮೇರೆಗೆ ನಾನು ಅದರ ಮೇಲೆ ನನ್ನ ಹೆಬ್ಬೆರಳಿನ ಗುರುತು ಹಾಕಿದ್ದೇನೆ. ನನಗೆ ನ್ಯಾಯ ಬೇಕು’’ಎಂದು ಮೃತ  ಯುವಕ ಅಲ್ತಾಫ್  ತಂದೆ ಚಾಂದ್ ಮಿಯಾನ್ ಹೇಳಿದರು.

ಮಹಿಳೆಯನ್ನು ಅಪಹರಿಸಿ ಬಲವಂತದ ಮದುವೆಗೆ ಸಂಬಂಧಿಸಿ ಕಳೆದ ವಾರ ದಾಖಲಾಗಿದ್ದ ಪ್ರಕರಣದಲ್ಲಿ ಸೋಮವಾರ ಸಂಜೆ ಅಲ್ತಾಫ್ ಎಂಬ ಯುವಕನನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು. ಆತ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News