×
Ad

ಇಂದೋರ್‌:ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರಿಂದ ಕಂಗನಾ ರಣಾವತ್ ಪ್ರತಿಕೃತಿ ದಹನ

Update: 2021-11-12 21:01 IST

ಇಂದೋರ್: 1947 ರಲ್ಲಿ ಪಡೆದಿರುವ ಸ್ವಾತಂತ್ರ್ಯ "ಭಿಕ್ಷೆ". 2014 ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರನ್ನು ಒಳಗೊಂಡ ಗುಂಪು ಶುಕ್ರವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಕೃತಿಯನ್ನು ದಹನ ಮಾಡಿದೆ.

ಇಲ್ಲಿನ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಇದರಲ್ಲಿ ಭಾಗವಹಿಸಿದವರಲ್ಲಿ ಒಬ್ಬರಾದ ಆಶಾ ಗೋವಿಂದ್ ಖಡಿವಾಲಾ ಅವರು, "ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಹಾಗೂ  ತ್ಯಾಗಕ್ಕೆ ನೋವುಂಟು ಮಾಡಿದ್ದಕ್ಕಾಗಿ ರಣಾವತ್ ಅವರು ರಾಷ್ಟ್ರದ ಕ್ಷಮೆಯಾಚಿಸಬೇಕು'' ಎಂದು ಹೇಳಿದರು.

ನಂತರ ಪ್ರತಿಭಟನಾಕಾರರು ಇಂದೋರ್ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News