ದಿಲ್ಲಿಯಲ್ಲಿ ವಾಯು ಮಾಲಿನ್ಯ ಬಿಕ್ಕಟ್ಟು: ಶಾಲೆ ಒಂದು ವಾರ ಬಂದ್, ಸದ್ಯಕ್ಕೆ ಲಾಕ್ ಡೌನ್ ಇಲ್ಲ

Update: 2021-11-13 13:00 GMT

ಹೊಸದಿಲ್ಲಿ: ದಿಲ್ಲಿ ಶಾಲೆಗಳು ಸೋಮವಾರದಿಂದ ಸಂಪೂರ್ಣವಾಗಿ ಆಫ್‌ಲೈನ್ ತರಗತಿಗಳಾಗಿ ಬದಲಾಗಲಿವೆ. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಮುಚ್ಚಲಾಗುವುದು ಹಾಗೂ  ಸರಕಾರಿ ಕಚೇರಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತವೆ. ಸದ್ಯಕ್ಕೆ ಲಾಕ್ ಡೌನ್ ಹೇರುವುದಿಲ್ಲ’’ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ದಿಲ್ಲಿಯಲ್ಲಿ ವಿಪರೀತ ವಾಯು ಮಾಲಿನ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಅಗತ್ಯಬಿದ್ದರೆ 2 ದಿನ ಲಾಕ್ ಡೌನ್ ಮಾಡುವಂತೆಯೂ ಸಲಹೆ ನೀಡಿತ್ತು.

ಇಂದು ದಿಲ್ಲಿ ಮಾಲಿನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ  ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ ಗಂಟೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದಿಲ್ಲಿಯು ಸಮಸ್ಯೆಯನ್ನು ನಿಭಾಯಿಸಲು ದೀರ್ಘಾವಧಿಯ ಪ್ರಯತ್ನಗಳ ಮೇಲೆ ತುರ್ತು ಪ್ರತಿಕ್ರಿಯೆಗೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಸಲಹೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News