×
Ad

ಮಹಾರಾಷ್ಟ್ರ: ಹತ ನಕ್ಸಲರಲ್ಲಿ ಎಲ್ಗರ್ ಪರಿಷತ್ ಪ್ರಕರಣದ ಆರೋಪಿ ಮಿಲಿಂದ್ ತೇಲ್ತುಂಬ್ಡೆ; ವರದಿ

Update: 2021-11-13 22:44 IST
ಮಿಲಿಂದ್ ತೇಲ್ತುಂಬ್ಡೆ (Photo: News18)

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟರು ಎಂದು ಶಂಕಿಸಲಾದ ಪ್ರಮುಖ ನಕ್ಸಲರಲ್ಲಿ ಓರ್ವನಾಗಿರುವ ಮಿಲಿಂದ್ ತೇಲ್ತುಂಬ್ಡೆ ಭೀಮಾ ಕೋರೆಗಾಂವ್ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂದು ನ್ಯೂಸ್ 18 ವರದಿ ಮಾಡಿದೆ.

ಮಿಲಿಂದ್ ದಲಿತ ನಾಯಕ ಆನಂದ ತೇಲ್ತುಂಬ್ಡೆ ಸಹೋದರ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ. ಮಿಲಿಂದ್ ತೇಲ್ತುಂಬ್ಡೆ ವಿವಿಧ ನಕ್ಸಲ್ ಕಾರ್ಯಕ್ರಮಗಳ ಹಿಂದಿನ ರೂವಾರಿಯಾಗಿದ್ದು ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ನ್ಯೂಸ್ 18 ವರದಿ ಮಾಡಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಎನ್ಐಎ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರಕಾರ ಮಿಲಿಂದ್ ಹಾಗೂ ಇತರ ಆರೋಪಿಗಳ ಮೇಲೆ ಯುಎಪಿಎ ಸೇರಿದಂತೆ ಸುಮಾರು 2 ಡಝನ್ ಆರೋಪಗಳನ್ನು ಹೊರಿಸಲಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಇತರ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು ಎಂದು ಎನ್ಐಎ ಹೇಳಿದೆ.

ಮಿಲಿಂದ್ ಎಲ್ಗರ್ ಪರಿಷತ್ತಿನ ಕಾರ್ಯಕ್ರಮದ ಕುರಿತು ಹಾಗೂ ಕಾರ್ಯಗತಗೊಳಿಸುವ ಜವಾಬ್ದಾರಿಯ ಬಗ್ಗೆ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿದ್ದಾಗಿ  ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News