ಹೈಕೋರ್ಟ್: 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Update: 2021-11-14 16:41 GMT

ಬೆಂಗಳೂರು, ನ. 14: ರಾಜ್ಯ ಹೈಕೋರ್ಟ್ 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದರಲ್ಲಿ 18 ಬ್ಯಾಕ್ ಲಾಗ್ ಹುದ್ದೆಗಳು ಹಾಗೂ 3 ಹೊಸ ಹುದ್ದೆಗಳು ಸೇರಿವೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದಾರೆ. ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಅರ್ಜಿಗಳನ್ನು 2021ರ ಡಿಸೆಂಬರ್ 9ರೊಳಗೆ ಆನ್ ಲೈನ್ ಮೂಲಕವಷ್ಟೇ ಕಳಿಸುವಂತೆ ಸೂಚಿಸಲಾಗಿದೆ.

ಅರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. 7 ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕು. ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು. ಎಸ್ಸಿ-ಎಸ್ಟಿ ವರ್ಗದ ಅಭ್ಯರ್ಥಿಗಳು 48 ವರ್ಷ ಮೀರಿರಬಾರದು. ವೇತನ ಶ್ರೇಣಿ: 51,550-63,070 ರೂಪಾಯಿ ಇರಲಿದೆ.

ಮೂರು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆಯಲ್ಲಿ 100 ಅಂಕಗಳ ವಸ್ತು ನಿಷ್ಠ ಮಾದರಿ ಪ್ರಶ್ನೆ ಪತ್ರಿಕೆ ಇರಲಿದೆ. ಮುಖ್ಯ ಪರೀಕ್ಷೆ ಲಿಖಿತ ರೂಪದಲ್ಲಿ ಇರಲಿದ್ದು, 150 ಅಂಕಗಳ ಎರಡು ಪತ್ರಿಕೆಗಳಿರಲಿವೆ. ಸಂದರ್ಶನ 50 ಅಂಕಗಳಿಗೆ ಇರಲಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೂಲಕ ಹೈಕೋರ್ಟ್ ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ. https://karnatakajudiciary.kar.nic.in/distjudges2021.php

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News