ಅಮೆರಿಕವನ್ನು ಹಿಂದಿಕ್ಕಿದ ಚೀನಾ ಜಗತ್ತಿನ ಶ್ರೀಮಂತ ದೇಶ

Update: 2021-11-16 17:30 GMT
photo:twitter

ಝ್ಯೂರಿಕ್‌, ನ. 16: ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ. ಈ ಹಾದಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಚೀನಾ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನಕ್ಕೇರಿದೆ. ಮೆಕ್‌ಕಿನ್ಸೆ ಆ್ಯಂಡ್ ಕೊ 10 ದೇಶಗಳ ಲೆಕ್ಕಪತ್ರದ ವಿವರಗಳನ್ನು ವರದಿ ಮಾಡಿದ್ದು, ಈ ದೇಶಗಳು ಜಗತ್ತಿನ ಒಟ್ಟು ಆದಾಯದ ಶೇ. 60ಕ್ಕಿಂತ ಹೆಚ್ಚು ಪಾಲು ಹೊಂದಿದೆ.

ಕಳೆದ ಎರಡು ದಶಕಗಳಲ್ಲಿ ಚೀನಾ ಜಾಗತಿಕ ಆದಾಯದ ಮೂರನೇ ಒಂದು ಭಾಗವನ್ನು ಹೊಂದಿದೆ ಎಂದು ವರದಿ ಹೇಳಿದೆ.

‘‘ನಾವು ಹಿಂದಿಗಿಂತಲೂ ಈಗ ಹೆಚ್ಚು ಶ್ರೀಮಂತರಾಗಿದ್ದೇವೆ’’ ಎಂದು ಝ್ಯೂರಿಕ್‌ನ ಮೆಕ್‌ಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ ಪಾಲುದಾರ ಜಾನ ಮಿಶ್ಚ್‌ಕೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News