ಸಿಬಿಐಗೆ ಮೂವರು ನೂತನ ಜಂಟಿ ನಿರ್ದೇಶಕರ ನೇಮಕ

Update: 2021-11-17 15:09 GMT

ಹೊಸದಿಲ್ಲಿ, ನ. 17: ಸಿಬಿಐಯ ಜಂಟಿ ನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ವಿದ್ಯಾ ಜಯಂತ್ ಕುಲಕರ್ಣಿ, ಘನಶ್ಯಾಮ್ ಉಪಾಧ್ಯಾಯ ಹಾಗೂ ನವಲ್ ಬಜಾಜ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ಹೇಳಿದೆ. ವಿದ್ಯಾ ಜಯಂತ್ ಕುಲಕರ್ಣಿ ಅವರು ತಮಿಳುನಾಡು ಕೇಡರ್‌ನ 1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರನ್ನು 5 ವರ್ಷಗಳ ಅವಧಿಗೆ ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗಿದೆ ಎಂದು ಅದು ತಿಳಿಸಿದೆ.

ಘನಶ್ಯಾಮ್ ಉಪಾಧ್ಯಾಯ ಅವರು ಒಡಿಶಾ ಕೇಡರ್‌ನ 1999ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರ ಅಧಿಕಾರಾವಧಿ 2026 ಜೂನ್ 29ರ ವರೆಗೆ ಮುಂದುವರಿಯಲಿದೆ. ನವಲ್ ಬಜಾಜ್ ಅವರು ಮಹಾರಾಷ್ಟ್ರ ಕೇಡರ್‌ನ 1995ರ ಬ್ಯಾಚ್‌ನ ಅಧಿಕಾರಿ. ಅವರ ಸಂಯುಕ್ತ ಅಧಿಕಾರಾವಧಿ 5 ವರ್ಷ ಇರಲಿದೆ. ಅಂದರೆ ಅವರು 2026 ಜೂನ್ 6ರ ವರೆಗೆ ಮುಂದುವರಿಯಲಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News