ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್‌ನನ್ನು ‘ಪರಾರಿಯಾದವ’ ಎಂದು ಘೋಷಿಸಬಹುದು: ಮುಂಬೈ ನ್ಯಾಯಾಲಯ

Update: 2021-11-17 15:15 GMT

ಮುಂಬೈ, ನ. 17: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ ಪರಮ್ ಬೀರ್ ಸಿಂಗ್‌ನನ್ನು ಪರಾರಿಯಾದವ ಎಂದು ಘೋಷಿಸಬಹುದು ಎಂದು ಮುಂಬೈ ನ್ಯಾಯಾಲಯ ಬುಧವಾರ ಹೇಳಿದೆ.

ನ್ಯಾಯಾಲಯದ ಆದೇಶದ ಬಳಿಕ ಮುಂಬೈ ಪೊಲೀಸರು ಈಗ ಪರಮ್ ಬೀರ್ ಸಿಂಗ್‌ನನ್ನು ‘ಬೇಕಾಗಿರುವ ಆರೋಪಿ’ ಎಂದು ಹೆಸರಿಸಬಹುದು ಹಾಗೂ ದೇಶದಿಂದ ಪರಾರಿಯಾದ ಆರೋಪಿ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಬಹುದು. ‘‘ಒಂದು ವೇಳೆ ಪರಮ್ ಬೀರ್ ಸಿಂಗ್ 30 ದಿನಗಳ ಒಳಗೆ ಕಾನೂನಿನ ಮುಂದೆ ಹಾಜರಾಗದೇ ಇದ್ದಲ್ಲಿ, ಮುಂಬೈ ಪೊಲೀಸರು ಅವರ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಿದ್ದಾರೆ’’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಜಗತಾಪ್ ತಿಳಿಸಿದ್ದಾರೆ.

ಪರಮ್ ಬೀರ್ ಸಿಂಗ್ ಕನಿಷ್ಠ 4 ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರು ದೇಶದಿಂದ ಪರಾರಿಯಾಗಿದ್ದಾರೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News