ಇರಾನ್ ಪ್ರಜೆಗಳು ಹಾಗೂ ಸಂಘಟನೆಗಳ ಮೇಲೆ‌ ಅಮೆರಿಕದ ನಿರ್ಬಂಧಕ್ಕೆ ಇರಾನ್ ಖಂಡನೆ

Update: 2021-11-19 16:28 GMT
photo:twitter/@SKhatibzadeh

ಟೆಹ್ರಾನ್, ನ.19: 2020ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಆರೋಪದಲ್ಲಿ ಹಲವು ಇರಾನ್ ಪ್ರಜೆಗಳು ಹಾಗೂ ಸಂಘಟನೆಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವುದನ್ನು ಇರಾನ್ ಖಂಡಿಸಿದೆ.

ಕೆಲವು ಆಯ್ದ ಮತದಾರರು, ಸಂಸತ್ತಿಗೆ ಆಯ್ಕೆಗೊಂಡಿದ್ದ ಸದಸ್ಯರು ಹಾಗೂ ಅಮೆರಿಕದ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು ಇಬ್ಬರು ಇರಾನ್ ಪ್ರಜೆಗಳು ಆನ್‌ಲೈನ್ ಮೂಲಕ ಸುಳ್ಳುಸುದ್ಧಿ ಮತ್ತು ತಪ್ಪು ಮಾಹಿತಿ ಪ್ರಸಾರ ಅಭಿಯಾನ ಆರಂಭಿಸಿದ್ದರು ಎಂದು ಘೋಷಿಸಿದ್ದ ಅಮೆರಿಕದ ಖಜಾನೆ ಇಲಾಖೆ, ಗುರುವಾರ ಇವರ ವಿರುದ್ಧ ನಿರ್ಬಂಧ ವಿಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ಮಾಜಿ ಅಧ್ಯಕ್ಷ ಟ್ರಂಪ್ ಅವರ ಗರಿಷ್ಟ ಒತ್ತಡ ಹೇರುವ ವಿಫಲ ಮತ್ತು ಅಕ್ರಮ ಕಾರ್ಯನೀತಿಯನ್ನು ಹಾಲಿ ಸರಕಾರವೂ ಮುಂದುವರಿಸಿರುವುದನ್ನು ಇರಾನ್ ಖಂಡಿಸುತ್ತದೆ. ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ವಿವಿಧ ರೀತಿ ಹಸ್ತಕ್ಷೇಪ ನಡೆಸುವ ಸುದೀರ್ಘ ಇತಿಹಾಸವನ್ನು ಹೊಂದಿರುವ ಅಮೆರಿಕ ಸರಕಾರ ಮಾಡಿರುವ ಈ ಆರೋಪ ನಿರಾಧಾರ ಎಂದು ಇರಾನ್‌ನ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಸಯೀದ್ ಖತೀಬ್ಜಾದೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News