ಕೃಷಿ ಕಾಯ್ದೆಗಳಿಗಿಂತ ಕನಿಷ್ಠ ಬೆಂಬಲ ಬೆಲೆ ದೊಡ್ಡ ವಿಷಯ: ನವಜೋತ್ ಸಿಂಗ್ ಸಿಧು

Update: 2021-11-19 18:25 GMT

ಚಂಡಿಗಢ, ನ. 19: ಕೃಷಿ ಕಾಯ್ದೆಗಳಿಗಿಂತ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದೊಡ್ಡ ವಿಷಯ ಎಂದು ಪಂಜಾಬ್ ಕಾಂಗ್ರೆಸ್‌ನ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ಹೇಳಿದ್ದಾರೆ. 

‘‘ಕನಿಷ್ಠ ಬೆಂಬಲ ಬೆಲೆ ಕೃಷಿ ಕಾಯ್ದೆಗಳಿಗಿಂತ ದೊಡ್ಡ ವಿಷಯ. ಅದು ಭಾರತೀಯ ರೈತರ ಜೀವನಾಡಿ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಈಡೇರಿಸಲು ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಬಯಸುವುದಾದರೆ ಅಥವಾ ಸ್ವಾಮಿನಾಥನ್ ವರದಿಯ ಸಿ2 ಫಾರ್ಮುಲಾವನ್ನು ಒಪ್ಪಿಕೊಳ್ಳುವುದಾದರೆ ಕನಿಷ್ಠ ಬೆಂಬಲ ಬೆಲೆಯ ಬೇಡಿಕೆಯನ್ನು ಈಡೇರಿಸಬೇಕು’’ ಎಂದು ಸಿಧು ಟ್ವೀಟ್ ಮಾಡಿದ್ದಾರೆ. 

ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಕೇಂದ್ರ ಸರಕಾರ ಸರಿಯಾದ ದಿಶೆಯಲ್ಲಿ ಹೆಜ್ಜೆ ಇರಿಸಿದೆ. ಕಿಸಾನ್ ಮೋರ್ಚಾಕ್ಕೆ ಚಾರಿತ್ರಿಕ ಯಶಸ್ಸು ದೊರೆತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News