×
Ad

ವಾಯುಮಾಲಿನ್ಯ: ಮುಂದಿನ ಸೂಚನೆಯವರೆಗೆ ದಿಲ್ಲಿಯಲ್ಲಿ ಶಾಲೆಗಳು ಬಂದ್

Update: 2021-11-21 20:37 IST

ಹೊಸದಿಲ್ಲಿ, ನ.21: ವಾಯುಮಾಲಿನ್ಯದಿಂದಾಗಿ ದಿಲ್ಲಿಯಲ್ಲಿನ ಎಲ್ಲ ಶಾಲೆಗಳು ಮುಂದಿನ ಸೂಚನೆಯವರೆಗೆ ಮುಚ್ಚಿರಲಿವೆ ಎಂದು ಶಿಕ್ಷಣ ಇಲಾಖೆಯು ರವಿವಾರ ತಿಳಿಸಿದೆ.

ಇಂದು ಬೆಳಿಗ್ಗೆಯೂ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ‘ಅತ್ಯಂತ ಕಳಪೆ’ ವರ್ಗದಲ್ಲಿಯೇ ಮುಂದುವರಿದಿದ್ದು,ಮುಂದಿನ ಸೂಚನೆಯವರೆಗೆ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಶಿಕ್ಷಣ ನಿರ್ದೇಶನಾಲಯವು ಆದೇಶವನ್ನು ಹೊರಡಿಸಿದೆ. ಈ ಅವಧಿಯಲ್ಲಿ ಆನ್ಲೈನ್ ತರಗತಿಗಳು ಮಾತ್ರ ನಡೆಯಲಿವೆ ಎಂದು ಹೆಚ್ಚುವರಿ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದರು.

ಆನ್ಲೈನ್ ಬೋಧನೆ ಮತ್ತು ಕಲಿಕೆ ಚಟುವಟಿಕೆಗಳು ಹಾಗೂ ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳು ಈ ಹಿಂದೆ ಹೊರಡಿಸಲಾಗಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಲಿವೆ ಎಂದು ಅವರು ಹೇಳಿದರು.

ನಗರದಲ್ಲಿ ರವಿವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ 382 ಆಗಿದ್ದು,301ರಿಂದ 400ರವರಗೆ ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News