ರೈತರ ಆದಾಯ ದ್ವಿಗುಣಗೊಳಿಸುವ ಕುರಿತ ಸಭೆಗೆ 29 ಸಂಸದರ ಪೈಕಿ 23 ಮಂದಿ ಗೈರು

Update: 2021-11-26 17:44 GMT

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರ ಪ್ರತಿಭಟನೆ ಒಂದು ವರ್ಷ ಪೂರೈಸಿದ ದಿನವೇ ಕೃಷಿ ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಬೇಕಾಯಿತು ಎಂದು indiatoday.in ವರದಿ ಮಾಡಿದೆ.

ಸಭೆಯ ಕಾರ್ಯಸೂಚಿಯು '2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು' ಎಂಬ ವಿಷಯದ ಬಗ್ಗೆ ಚರ್ಚಿಸುವುದಾಗಿತ್ತು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧಿಕಾರಿಗಳಿಂದ ವಿವರಿಸಲು ನಿರ್ಧರಿಸಲಾಗಿತ್ತು.

ವರದಿಗಳ ಪ್ರಕಾರ, ಸಂಸತ್ತಿನ ಕೃಷಿ ಸಮಿತಿಯು ಕೋರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿದೆ.

29 ಸಂಸದರಲ್ಲಿ ಆರು ಮಂದಿ ಮಾತ್ರ ಸಭೆಗೆ ಹಾಜರಾಗಿದ್ದರು. ಅವರಲ್ಲಿ 26 ಮಂದಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಚರ್ಚೆಯಿಂದ ಹೊರಗುಳಿಯಲು ನಿರ್ಧರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದವರು ಅನೌಪಚಾರಿಕ ಪ್ರತಿಕ್ರಿಯೆ ನೀಡಲು ಕೇಳಿಕೊಂಡರು. ಮುಂದಿನ 10 ದಿನಗಳೊಳಗೆ ಸಮಿತಿಯ ಮತ್ತೊಂದು ಸಭೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯು ಪ್ರಸ್ತುತ 29 ಸದಸ್ಯರನ್ನು ಹೊಂದಿದ್ದು, ಎರಡು ಸ್ಥಾನಗಳು ಖಾಲಿ ಉಳಿದಿವೆ.  29 ರಲ್ಲಿ 21 ಮಂದಿ ಲೋಕಸಭಾ ಸದಸ್ಯರು, ಉಳಿದ ಎಂಟು ಮಂದಿ ರಾಜ್ಯಸಭಾ ಸದಸ್ಯರು.

ಯಾವುದೇ ಪೂರ್ವಾನುಮತಿ ಅಥವಾ ಸೂಚನೆ ಇಲ್ಲದೆ ಸಭೆಗೆ ಗೈರು ಹಾಜರಾಗುವ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಸಭೆಯ ನಡಾವಳಿಗಳ ಬಗ್ಗೆ ತಿಳಿದಿರುವ ಮೂಲಗಳು ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News