×
Ad

ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ ನಾಲ್ವರಿಗಾಗಿ ಎನ್ ಡಿಆರ್ ಎಫ್ ಶೋಧ

Update: 2021-11-29 15:42 IST
ಸಾಂದರ್ಭಿಕ ಚಿತ್ರ

ಬೊಕಾರೊ(ಜಾರ್ಖಂಡ್): ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಮುಚ್ಚಲಾದ ಕಲ್ಲಿದ್ದಲು ಗಣಿಯಲ್ಲಿ ಅಕ್ರಮ ಉತ್ಖನನದ ವೇಳೆ ನಾಲ್ವರು ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪರ್ಬತ್‌ಪುರದಲ್ಲಿರುವ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್) ಗಣಿಯಿಂದ ಹೊರಬರಲು ಚಂದಂಕಿಯರಿ ಬ್ಲಾಕ್‌ನ ತಿಲತಂಡ್ ಗ್ರಾಮದ ಎಲ್ಲಾ ನಿವಾಸಿಗಳಾದ ನಾಲ್ವರು 20 ಗಂಟೆಗಳ ಕಾಲ ಗಣಿ ಅಗೆದಿದ್ದರು.  

ಸೋಮವಾರ ಮುಂಜಾನೆ 3:30 ರ ಸುಮಾರಿಗೆ ಗಣಿಯಲ್ಲಿ ಸಿಕ್ಕಿಬಿದ್ದ ಜನರನ್ನು ಲಕ್ಷ್ಮಣ್ ರಾಜ್ವರ್(42), ಅನಾದಿ ಸಿಂಗ್( 45), ರಾವಣ ರಾಜ್ವರ್(46), ಹಾಗೂ  ಭರತ್ ಸಿಂಗ್, 45 ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕುಮಾರ್ ಝಾ ತಿಳಿಸಿದ್ದಾರೆ.

ನಾಪತ್ತೆಯಾದವರ  ಪತ್ತೆ ಹಚ್ಚಲು ಜಿಲ್ಲಾಡಳಿತ ಮತ್ತು ಬಿಸಿಸಿಎಲ್ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ರವಿವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಶುಕ್ರವಾರ ಆರು ಜನರು ಅಕ್ರಮ ಉತ್ಖನನಕ್ಕಾಗಿ ಮುಚ್ಚಿದ ಕಲ್ಲಿದ್ದಲು ಗಣಿ ಪ್ರವೇಶಿಸಿದ್ದರು.ಅದರ ಒಂದು ಭಾಗವು ಕುಸಿದುಬಿದ್ದಾಗ ಅವರು ಸಿಕ್ಕಿಬಿದ್ದರು ಎಂದು ಝಾ ಹೇಳಿದರು.

ಘಟನೆ ಸಂಭವಿಸಿದ ತಕ್ಷಣ ಇಬ್ಬರು ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಉಳಿದ ನಾಲ್ವರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಪತ್ತೆಯಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News