12 ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸದ ಕಾರಣ ಅಮಾನತು ಶಿಕ್ಷೆ ಹಿಂಪಡೆಯುವುದಿಲ್ಲ: ವೆಂಕಯ್ಯ ನಾಯ್ಡು

Update: 2021-11-30 06:42 GMT
ವೆಂಕಯ್ಯ ನಾಯ್ಡು (PTI)

ಹೊಸದಿಲ್ಲಿ: ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರ ಘಟನೆಗಳಿಗೆ ಸಂಬಂಧಿಸಿದ "ದುರ್ ವರ್ತನೆ" ಗಾಗಿ 12 ಸಂಸದರ ಅಮಾನತು ರದ್ದುಗೊಳಿಸುವುದಿಲ್ಲ ಎಂದು ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಮಂಗಳವಾರ ಬೆಳಿಗ್ಗೆ ಹೇಳಿದ್ದಾರೆ. 

ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸದ ಕಾರಣ ಅಮಾನತು ಶಿಕ್ಷೆ  ಹಿಂಪಡೆಯುವುದಿಲ್ಲ ಎಂದು ನಾಯ್ಡು ಹೇಳಿದರು.

"ಅಮಾನತುಗೊಂಡ ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ವಿರೋಧ ಪಕ್ಷದ ನಾಯಕ (ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ) ಅವರ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ. ಅಮಾನತು ಹಿಂಪಡೆಯುವುದಿಲ್ಲ" ಎಂದು ಅವರು ಹೇಳಿದರು.

ಕೆಲವೇ ನಿಮಿಷಗಳ ಹಿಂದೆ ಖರ್ಗೆ ಅವರು ಸಂಸದರನ್ನು(ಪಟ್ಟಿಯಲ್ಲಿ ಕಾಂಗ್ರೆಸ್‌ನ ಆರು ಮಂದಿ ಸೇರಿದ್ದಾರೆ) ಅಮಾನತುಗೊಳಿಸುವ ಸರಕಾರದ "ಆಯ್ಕೆ" ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು. 12 ಪ್ರತಿಪಕ್ಷಗಳ ಸಂಸದರ ಅಮಾನತು ಹಿಂಪಡೆಯಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಆಯ್ದುಕೊಂಡು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News