ಮಹಾರಾಷ್ಟ್ರ: 'ಅಪಾಯದಲ್ಲಿರುವ' ರಾಷ್ಟ್ರಗಳಿಂದ ಬರುವವರಿಗೆ 7 ದಿನಗಳ ಸಾಂಸ್ಥಿಕ ಸಂಪರ್ಕತಡೆ

Update: 2021-12-01 05:39 GMT

ಮುಂಬೈ: “ಅಪಾಯದಲ್ಲಿರುವ” ದೇಶಗಳಿಂದ ಆಗಮಿಸುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಸಾಂಸ್ಥಿಕ ಸಂಪರ್ಕತಡೆಗೆ ಒಳಗಾಗಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರಕಾರ ಮಂಗಳವಾರ ಹೇಳಿದೆ.

ಪ್ರಯಾಣಿಕರನ್ನು ಕಡ್ಡಾಯ ಐಸೋಲೇಶನ್ ಸೌಲಭ್ಯಗಳಲ್ಲಿ ಇರಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳು ಹೇಳುತ್ತವೆ. ಪ್ರಯಾಣಿಕರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗಾಗಿ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಆದೇಶವು ರಾಜ್ಯ ವಿಮಾನ ನಿಲ್ದಾಣಗಳಲ್ಲಿ ಗೊಂದಲವನ್ನು ಉಂಟುಮಾಡಬಹುದು. ಏಕೆಂದರೆ ಅನೇಕ ಪ್ರಯಾಣಿಕರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮಗಳು ಹಾಗೂ  ಅವರು ಪಾವತಿಸಬೇಕಾದ ಹೋಟೆಲ್ ಶುಲ್ಕಗಳ ಬಗ್ಗೆ ಅರಿವಿರದ ಸಾಧ್ಯತೆ ಇರುತ್ತದೆ.

ಈ ಪ್ರಯಾಣಿಕರು ಕೋವಿಡ್‌ಗಾಗಿ ಮೂರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ .ಆಗಮನದ ನಂತರ ಎರಡನೇ, ನಾಲ್ಕನೇ ಮತ್ತು ಏಳನೇ ದಿನಗಳಲ್ಲಿ ಪರೀಕ್ಷೆರ ಮಾಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News