ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರದಿರಲು ನೀಡಿದ ಕಾರಣ ತೃಪ್ತಿ ತಂದಿಲ್ಲ: ಕೇರಳ ಹೈಕೋರ್ಟ್

Update: 2021-12-01 18:14 GMT

ತಿರುವನಂತಪುರ:ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಏಕೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಹಾಗೂ  ಜಿಎಸ್‌ಟಿ ಕೌನ್ಸಿಲ್ ಸೂಚಿಸಿದ ಕಾರಣಗಳಿಂದ ತೃಪ್ತವಾಗಿಲ್ಲ ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ಹೇಳಿದೆ.

ಕೌನ್ಸಿಲ್ ಉಲ್ಲೇಖಿಸಿದ ಒಂದು ಕಾರಣವೆಂದರೆ ಸಾಂಕ್ರಾಮಿಕ ಸಮಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಆಡಳಿತದ ಅಡಿಯಲ್ಲಿ ತರಲು ಕಷ್ಟವಾಗುತ್ತದೆ.

ಕಳೆದ ತಿಂಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸದ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೌನ್ಸಿಲ್‌ಗೆ ಹೇಳಿಕೆ ನೀಡುವಂತೆ ಸೂಚಿಸಿತ್ತು.

ಬುಧವಾರ ಜಿಎಸ್‌ಟಿ ಕೌನ್ಸಿಲ್‌ನ ಸ್ಥಾಯಿ ವಕೀಲರು ಮುಖ್ಯ ನ್ಯಾಯಮೂರ್ತಿ ಎಸ್ . ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠಕ್ಕೆ ಹೇಳಿಕೆಯನ್ನು ಹಸ್ತಾಂತರಿಸಿದರು.

 “ನಾವು ಕಾರಣಗಳಿಂದ ತೃಪ್ತರಾಗಿಲ್ಲ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಆಡಳಿತಕ್ಕೆ ಏಕೆ ತರಲು ಸಾಧ್ಯವಿಲ್ಲ ಎಂಬುದಕ್ಕೆ ಕೆಲವು ಚರ್ಚೆಗಳು ಹಾಗೂ  ನಿಜವಾದ ಕಾರಣಗಳು ಇರಬೇಕು. ಇದಲ್ಲದೆ, ಸಾಂಕ್ರಾಮಿಕ ಅವಧಿಯನ್ನು ಒಂದು ಕಾರಣವಾಗಿ ಉಲ್ಲೇಖಿಸಲಾಗುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿಯೂ ಕೂಡ ಚರ್ಚೆಯ ನಂತರ ಆದಾಯವನ್ನು ಒಳಗೊಂಡ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News