ಖಾಸಗೀಕರಣ ಪ್ರಸ್ತಾವದ ಮಸೂದೆ :ಡಿಸೆಂಬರ್ 16ರಿಂದ ಎರಡು ದಿನಗಳ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳ ಕರೆ

Update: 2021-12-01 18:34 GMT
Photo: Twitter/@DSFJNU

ಹೊಸದಿಲ್ಲಿ, ಡಿ.1: ಪ್ರಸ್ತಾವಿತ ಬ್ಯಾಂಕಿಂಗ್ ಕಾಯ್ದೆಗಳ (ತಿದ್ದುಪಡಿ) ಮಸೂದೆ-2021ರ ವಿರುದ್ಧ ಡಿಸೆಂಬರ್ 16ರಿಂದ ಎರಡು ದಿನಗಳ ಮುಷ್ಕರಕ್ಕೆ 9 ಬ್ಯಾಂಕ್ ಒಕ್ಕೂಟಗಳ ಮಾತೃ ಸಂಘಟನೆ ‘ದಿ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್’ ಕರೆ ನೀಡಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ ಖಾಸಗೀಕರಣದ ನಿಯಮಗಳನ್ನು ಈ ಮಸೂದೆ ಪರಿಚಯಿಸಲಿದೆ. ಫೆಬ್ರವರಿಯಲ್ಲಿ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದ ಹೂಡಿಕೆ ಹಿಂದೆಗೆದ ಯೋಜನೆಯ ಭಾಗವಾಗಿ ಸರಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಿಸಲಾಗುವುದು ಎಂದು ಘೋಷಿಸಿದ್ದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾಯ್ದೆಗಳ (ತಿದ್ದುಪಡಿ) ಮಸೂದೆಯ ಕುರಿತು ಚರ್ಚಿಸಲು ಪರಿಗಣಿಸಲಾಗಿದೆ. ಉದ್ಯೋಗ ನಷ್ಟವಾಗುವ ಭೀತಿಯಲ್ಲಿ ಬ್ಯಾಂಕ್ ಉದ್ಯೋಗಿಗಳು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರಕಾರದ ಈ ನಡೆಯನ್ನು ವಿರೋಧಿಸಲು ಬ್ಯಾಂಕ್ ಒಕ್ಕೂಟಗಳ ಗುಂಪು ನಿರ್ಧರಿಸಿದೆ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News