ಹಸಿರು ಹೈಡ್ರೋಜನ್ ನಲ್ಲೂ ಕಾರು ಓಡುತ್ತದೆ ಎಂದು ಜನರಿಗೆ ನಂಬಿಕೆ ಬರಲು ಪೈಲಟ್ ಪ್ರಾಜೆಕ್ಟ್ ಕಾರು ಖರೀದಿಸಿದ ಗಡ್ಕರಿ

Update: 2021-12-03 08:24 GMT

ಹೊಸದಿಲ್ಲಿ: ‘ತ್ಯಾಜ್ಯದಿಂದ ಮೌಲ್ಯ ಸೃಷ್ಟಿಸಲು’ ತಾನು ಉದ್ದೇಶಿಸಿದ್ದು, ವಿವಿಧ ನಗರಗಳಲ್ಲಿ ಬಸ್‌, ಟ್ರಕ್‌ ಹಾಗೂ  ಕಾರುಗಳನ್ನು ಓಡಿಸಲು ಹಸಿರು ಹೈಡ್ರೋಜನ್‌ ಬಳಸಲು ಯೋಜಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಗುರುವಾರ ನಡೆದ ಹಣಕಾಸು ಸೇರ್ಪಡೆ ಕುರಿತ ಆರನೇ ರಾಷ್ಟ್ರೀಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, "ನಗರಗಳಲ್ಲಿ ಒಳಚರಂಡಿ ನೀರು ಹಾಗೂ  ಘನತ್ಯಾಜ್ಯವನ್ನು ಬಳಸಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ನಲ್ಲಿ ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳನ್ನು ಓಡಿಸುವ ಯೋಜನೆಯನ್ನು ನಾನು ಹೊಂದಿದ್ದೇನೆ" ಎಂದು ಹೇಳಿದರು.

ತ್ಯಾಜ್ಯ ನೀರಿನಿಂದ ಹೊರತೆಗೆಯಲಾದ ಹೈಡ್ರೋಜನ್‌ನಲ್ಲಿ ವಾಹನಗಳು ಚಲಿಸಬಹುದು ಎಂದು "ಜನರಲ್ಲಿ ನಂಬಿಕೆ ಮೂಡಿಸುವ" ಪ್ರಯತ್ನದಲ್ಲಿ ಕೇಂದ್ರ ಸಚಿವರು, "ನಾನು ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ನಿಂದ ಚಲಿಸುವ ಪೈಲಟ್ ಪ್ರಾಜೆಕ್ಟ್ ಕಾರನ್ನು ಖರೀದಿಸಿದ್ದೇನೆ. ಜನರನ್ನು ನಂಬಿಸಲು ನಗರದ ಸವಾರಿ ಮಾಡುತ್ತೇನೆ ... "ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News