ಮಾರ್ಗಮಧ್ಯೆ ಪ್ರಯಾಣಿಕನ ಸಾವು: ಅಮೆರಿಕಕ್ಕೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನ ವಾಪಸ್

Update: 2021-12-04 15:35 GMT

ಹೊಸದಿಲ್ಲಿ, ಡಿ.4: ಶನಿವಾರ ದಿಲ್ಲಿಯಿಂದ ಅಮೆರಿಕದ ನೇವಾರ್ಕ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನವು ಪ್ರಯಾಣಿಕನೋರ್ವನ ನಿಧನದಿಂದಾಗಿ ಟೇಕ್ ಆಫ್ ಆದ ಮೂರು ಗಂಟೆಗಳಲ್ಲಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ವಾಪಸಾಗಿದೆ.

ವಿಮಾನವನ್ನು ಪ್ರವೇಶಿಸಿದ ಏರ್‌ಇಂಡಿಯಾ ವೈದ್ಯರ ತಂಡವು ಪ್ರಯಾಣಿಕನ ತಪಾಸಣೆ ನಡೆಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿತು. ಮೃತ ವ್ಯಕ್ತಿ ಅಮೆರಿಕದ ಪ್ರಜೆಯಾಗಿದ್ದು,ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ಏರ್‌ಇಂಡಿಯಾ ಅಧಿಕಾರಿಯೋರ್ವರು ತಿಳಿಸಿದರು.

ಹಾರಾಟ ಸಮಯ ಕರ್ತವ್ಯ ಮಿತಿ ನಿಯಮಗಳಂತೆ ಪೈಲಟ್‌ಗಳು ಮತ್ತು ಸಿಬ್ಬಂದಿಗಳ ಬದಲಾವಣೆಯ ಬಳಿಕ ಅದೇ ವಿಮಾನವು ನೇವಾರ್ಕ್‌ಗೆ ತನ್ನ ಪ್ರಯಾಣವನ್ನು ಮುಂದುವರಿಸಿತು.

ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಪ್ರಕರಣದ ಬಗ್ಗೆ ಏರ್‌ಪೋರ್ಟ್ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News