×
Ad

ಮಾಸ್ಕ್ ಧಾರಣೆಯಲ್ಲಿ ಭಾರತ ಹಿಂದೆ

Update: 2021-12-05 00:36 IST

ಹೈದರಾಬಾದ್: ದೇಶದಲ್ಲಿ ಕೋರೋನದ ರೂಪಾಂತರಿ ಪ್ರಬೇಧ ಒಮೈಕ್ರಾನ್ ಪತ್ತೆಯಾಗಿರುವುದರಿಂದ ಉಂಟಾದ ಕಳವಳದ ಹೊರತಾಗಿಯೂ ಮಾಸ್ಕ್ ಧರಿಸುವ ನಿಯಮವನ್ನು ಅನುಸರಿಸುತ್ತಿರುವವರ ಸಂಖ್ಯೆ ಅತಿ ಕಡಿಮೆ ಇದೆ. ತಮ್ಮ ಪ್ರದೇಶ, ನಗರ ಅಥವಾ ಜಿಲ್ಲೆಯ ಜನರು ಮಾಸ್ಕ್ ಧರಿಸುವ ನಿಯಮವನ್ನು ಚೆನ್ನಾಗಿ ಅನುಸರಿಸುತ್ತಾರೆ ಎಂದು ಸಮೀಕ್ಷೆ ಗೆ ಒಳಗಾದ ಕೇವಲ ಶೇ. 2 ನಾಗರಿಕರು ಹೇಳಿದ್ದಾರೆ.

 ಡಿಜಿಟಲ್ ಸಮುದಾಯ ಆಧರಿತ ವೇದಿಕೆ ಲೋಕಲ್ ಸರ್ಕಲ್ ಆಯೋಜಿಸಿದ ಇತ್ತೀಚೆಗಿನ ಸಮೀಕ್ಷೆ ಪ್ರಕಾರ, ತಮ್ಮ ಪ್ರದೇಶದಲ್ಲಿರುವ ಹೆಚ್ಚಿನ ಜನರು ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಅನ್ನು ಕೂಡ ತೆಗೆದುಕೊಂಡು ಹೋಗುವುದಿಲ್ಲ ಎಂದು ಮೂರರಲ್ಲಿ ಓರ್ವ ಭಾರತೀಯ ಹೇಳಿದ್ದಾನೆ. ಈ ಸಮೀಕ್ಷೆಯನ್ನು ಎಪ್ರಿಲ್‌ನಲ್ಲಿ ನಡೆಸಲಾಗಿತ್ತು. ದೇಶದ 364 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ನಾಗರಿಕರಿಂದ 25 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿತ್ತು.

ಶೇ. 29 ನಾಗರಿಕರು ಮಾಸ್ಕ್ ಧರಿಸಿರುವುದು ಅತ್ಯಧಿಕ. ಇದು ಸೆಪ್ಟಂಬರ್‌ನಲ್ಲಿ ಶೇ. 12ಕ್ಕೆ ಇಳಿಯಿತು. ನವೆಂಬರ್‌ರಲ್ಲಿ ಕೇವಲ ಶೇ. 2ಕ್ಕೆ ತೀವ್ರವಾಗಿ ಕುಸಿಯಿತು ಎಂದು ಸಮೀಕ್ಷೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News