ಹೊಸದಿಲ್ಲಿ: ರೋಹಿಣಿ ನ್ಯಾಯಾಲಯದಲ್ಲಿ ಸ್ಫೋಟ

Update: 2021-12-09 19:27 GMT

ಹೊಸದಿಲ್ಲಿ, ಡಿ. 9: ದಿಲ್ಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಲಘು ಸ್ಫೋಟದ ಪರಿಣಾಮ ಓರ್ವ ಗಾಯಗೊಂಡಿದ್ದಾನೆ. ನ್ಯಾಯಾಲಯದ ಕೊಠಡಿ ಸಂಖ್ಯೆ 102ರ ಒಳಗೆ ಬೆಳಗ್ಗೆ ಸುಮಾರು 10.30ಕ್ಕೆ ಈ ಸ್ಫೋಟ ಸಂಭವಿಸಿದೆ. ಲ್ಯಾಪ್‌ಟಾಪ್ ಬ್ಯಾಗ್ ಸ್ಫೋಟದ ಮೂಲವಾಗಿರಬಹುದು ಎಂದು ದಿಲ್ಲಿ ಪೊಲೀಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ‘‘ಸ್ಫೋಟ ಸಂಭವಿಸಿದ ಸ್ಥಳವನ್ನು ಸುತ್ತವರಿಯಲಾಗಿದೆ. ವಿಧಿವಿಜ್ಞಾನ ಇಲಾಖೆ ಹಾಗೂ ಎನ್‌ಎಸ್‌ಜಿಯ ತಂಡ ಪರಿಶೀಲನೆ ನಡೆಸುತ್ತಿದೆ’’ ಎಂದು ಅವರು ಹೇಳಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಸೆಪ್ಟಂಬರ್ 24ರಂದು ಭೂಗತ ಪಾತಕಿ ಜಿತೇಂದ್ರ ಗೋಗಿಯನ್ನು ಗುಂಡು ಹಾರಿಸಿ ಹತ್ಯೆಗೈದ ಮೂರು ತಿಂಗಳಿಗಿಂತ ಮೊದಲು ಈ ಸ್ಫೋಟ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News