ಬಿಎಸ್‌ಎಫ್‌ ವ್ಯಾಪ್ತಿ ವಿಸ್ತರಣೆ: ಕೇಂದ್ರ ಸರಕಾರದ ನಿರ್ಧಾರದ ವಿರುದ್ದ ಸುಪ್ರೀಂ ಮೊರೆ ಹೋದ ಪಂಜಾಬ್‌ ಸರಕಾರ

Update: 2021-12-11 14:13 GMT

ಹೊಸದಿಲ್ಲಿ: ಮೂರು ರಾಜ್ಯಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವ್ಯಾಪ್ತಿಯನ್ನು ಅಂತರಾಷ್ಟ್ರೀಯ ಗಡಿಯಿಂದ 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಶುಕ್ರವಾರ ದಾವೆಯನ್ನು ರಿಜಿಸ್ಟ್ರಾರ್ ಮುಂದೆ ಪಟ್ಟಿ ಮಾಡಲಾಗಿದ್ದು, ಅವರು ಅಟಾರ್ನಿ ಜನರಲ್ ಮೂಲಕ ಕೇಂದ್ರಕ್ಕೆ ನೋಟಿಸ್ ನೀಡಿದ್ದಾರೆ. ನಾಲ್ಕು ವಾರಗಳ ನಂತರ ಸುಪ್ರೀಂ ಕೋರ್ಟ್ ಪೀಠದ ಮುಂದೆ ಈ ವಿಷಯ ಬರಲಿದೆ.

ಪಂಜಾಬ್ ಸರಕಾರ ಮತ್ತು ಅದರ ಕಾನೂನು ತಂಡವನ್ನು ಅಭಿನಂದಿಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, "ರಾಜ್ಯಗಳ ಒಕ್ಕೂಟ ರಚನೆ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಸಂವಿಧಾನದಲ್ಲಿ ಅಳವಡಿಸಲಾಗಿರುವ ತತ್ವಗಳನ್ನು ಉಳಿಸಿಕೊಳ್ಳುವ ಹೋರಾಟ ಪ್ರಾರಂಭವಾಗಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News