ರಾವತ್ ಹೆಲಿಕಾಪ್ಟರ್ ಪತನದ ನಂತರ ಡಿಎಂಕೆ ವಿರುದ್ಧ ಟ್ವೀಟ್ ಮಾಡಿದ್ದ ಯೂಟ್ಯೂಬರ್ ಬಂಧನ: ಬಿಜೆಪಿ ವಿರೋಧ

Update: 2021-12-11 18:02 GMT
Photo: Indian express

ಹೊಸದಿಲ್ಲಿ: ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ  ಇತರ 11 ಮಂದಿ ಸಾವನ್ನಪ್ಪಿದ ಹೆಲಿಕಾಪ್ಟರ್ ಅಪಘಾತದ ನಂತರ ಆಡಳಿತಾರೂಢ ಡಿಎಂಕೆ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಯೂಟ್ಯೂಬರ್ ಮರಿದಾಸ್ ಅವರನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಬಂಧಿಸಲಾಗಿದೆ. 

ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸೇರಿದಂತೆ ಬಿಜೆಪಿ ನಾಯಕರು ರಾಜ್ಯದ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ಮುಖವಾಗಿರುವ ಯೂಟ್ಯೂಬರ್‌ಗೆ ಬೆಂಬಲ ನೀಡಿದ್ದು, ಬಂಧನವನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ.

ಹೆಲಿಕಾಪ್ಟರ್ ಅಪಘಾತದ ಒಂದು ದಿನದ ನಂತರ ಈಗ ಅಳಿಸಲಾದ ಟ್ವೀಟ್ ಗುರುವಾರ ಪೋಸ್ಟ್ ಮಾಡಲಾಗಿದ್ದು, "ಡಿಎಂಕೆ ಆಡಳಿತದಲ್ಲಿ ತಮಿಳುನಾಡು ಮತ್ತೊಂದು ಕಾಶ್ಮೀರವಾಗುತ್ತಿದೆ" ಹಾಗೂ  ಡಿಎಂಕೆ "ದೇಶದ ವಿರುದ್ಧ ಯಾವುದೇ ಮಟ್ಟದ ದೇಶದ್ರೋಹವನ್ನು ಮಾಡುವ ಗುಂಪುಗಳನ್ನು ರಚಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ" ಎಂದು ಆರೋಪಿಸಲಾಗಿತ್ತು.

ಟ್ವೀಟ್ ಅನ್ನು ಅಳಿಸುವ ಮೊದಲು 300 ಕ್ಕೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಮರಿದಾಸ್ ಟ್ವಿಟ್ಟರ್ ನಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಮರಿಧಾಸ್ ಅವರನ್ನು ಅವರ ಮಧುರೈ ನಿವಾಸದಿಂದ ಬಂಧಿಸಲು ಪೊಲೀಸರು ಗುರುವಾರ ತೆರಳಿದಾಗ ಸ್ಥಳೀಯ ಬಿಜೆಪಿ ಮುಖಂಡರು ಬಂಧನವನ್ನು ತಡೆಯಲು ಜಮಾಯಿಸಿದರು ಹಾಗೂ  ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದರು.

ಶುಕ್ರವಾರ ಬಂಧನವಾದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, "ಪೊಲೀಸ್ ಬಂಧನವು ಕಾನೂನಿನ ಮೂಲಕ ಎಲ್ಲರಿಗೂ ಲಭ್ಯವಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಂಭೀರವಾಗಿ ಉಲ್ಲಂಘಿಸಿದೆ. ಅವರೆಲ್ಲರನ್ನೂ ನ್ಯಾಯಾಂಗ ಬಂಧನದಿಂದ ಹೊರತರಲು ತಮಿಳುನಾಡು ಬಿಜೆಪಿ  ಹೋರಾಡುತ್ತದೆ. ನಮ್ಮ ಪಕ್ಷವು ಅವರನ್ನು ಮತ್ತು ಅವರ ಕುಟುಂಬಗಳನ್ನು ಎಲ್ಲಾ ರೀತಿಯಲ್ಲೂ ನೋಡಿಕೊಳ್ಳುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News