ಗುಜರಾತ್:‌ ಬಿಜೆಪಿ ಶಾಸಕಿ ಆಶಾ ಪಟೇಲ್‌ 44ನೇ ವಯಸ್ಸಿನಲ್ಲಿ ಮೃತ್ಯು

Update: 2021-12-12 12:30 GMT

ಗುಜರಾತ್ ಬಿಜೆಪಿ ಶಾಸಕಿ ಆಶಾ ಪಟೇಲ್ ಅವರು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಡೆಂಗ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ರವಿವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ಪಕ್ಷದ ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ.

ಮೆಹ್ಸಾನಾ ಜಿಲ್ಲೆಯ ಉಂಜಾ ವಿಧಾನಸಭಾ ಕ್ಷೇತ್ರದ 44 ವರ್ಷದ ಶಾಸಕಿ ಶುಕ್ರವಾರ ಸಂಜೆ ಜೈಡಸ್ ಆಸ್ಪತ್ರೆಗೆ ದಾಖಲಾದ ನಂತರ ವೆಂಟಿಲೇಟರ್ ಬೆಂಬಲದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.

"ಉಂಝಾ ಶಾಸಕಿ ಆಶಾ ಪಟೇಲ್ ಈಗ ನಮ್ಮೊಂದಿಗೆ ಇಲ್ಲ ಎಂದು ನಾನು ನಿಮಗೆ ತೀವ್ರ ದುಃಖದಿಂದ ತಿಳಿಸುತ್ತೇನೆ. ಅವರನ್ನು ಡೆಂಗ್ ಚಿಕಿತ್ಸೆಗಾಗಿ ಅಹಮದಾಬಾದ್‌ನ ಝೈಡಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ರೋಗದ ಗಂಭೀರತೆಯ ಕಾರಣದಿಂದ ವೈದ್ಯರ ತಂಡದ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಆಕೆಯನ್ನು ಉಳಿಸಲಾಗಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

ಅವರ ಪಾರ್ಥಿವ ಶರೀರವನ್ನು ಉಂಝಾಗೆ ಕೊಂಡೊಯ್ದು ಸಾರ್ವಜನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಾರುಕಟ್ಟೆಯ ಅಂಗಳದಲ್ಲಿ ಇಡಲಾಗುವುದು ಮತ್ತು ಸೋಮವಾರ ಸಿದ್ಧಪುರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News