×
Ad

ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಅಮೇಠಿಯಲ್ಲಿ ಏಳು ವರ್ಷಗಳಲ್ಲಿ ಏನು ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ ಪ್ರಶ್ನೆ

Update: 2021-12-18 22:50 IST

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಪಕ್ಷದ ರ್ಯಾಲಿಯೊಂದರಲ್ಲಿ ವಾಗ್ದಾಳಿ ನಡೆಸಿದರು. ಕೋವಿಡ್ -19 ರ ಎರಡನೇ ಅಲೆ ಸಮಯದಲ್ಲಿ ಸಂಭವಿಸಿದ ಸಾವುಗಳು ಹಾಗೂ  ಬೆಲೆ ಏರಿಕೆಯ ವಿಚಾರವನ್ನು ಎತ್ತಿದ್ದಾರೆ.

"ಕೋವಿಡ್-19 ರ ಮೊದಲ ಅಲೆಯ ಸಮಯದಲ್ಲಿ ಬಿಜೆಪಿ ಏನು ಮಾಡಿದೆ? ಆಮ್ಲಜನಕ ಸಿಲಿಂಡರ್‌ಗಳ ಕೊರತೆಗೆ ಆ ಪಕ್ಷವೇ ಜವಾಬ್ದಾರಿಯಾಗಿದೆ' ಎಂದು ಅವರು ಹೇಳಿದರು.

ಕೊರೋನ 2ನೇ ಅಲೆಯ ಸಂದರ್ಭ ವೈದ್ಯಕೀಯ ಆಕ್ಸಿಜನ್ ನ ಕೊರತೆಯಿಂದಾಗಿ ಹಲವು ಜನರು ಸಾವನ್ನಪ್ಪಿದ್ದನ್ನು ಪ್ರಿಯಾಂಕಾ ಗಾಂಧಿ ಭಾಷಣದಲ್ಲಿ ಉಲ್ಲೇಖಿಸಿದರು.

74 ವರ್ಷಗಳ ಹಿಂದೆ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ತನ್ನ ಆಡಳಿತದಲ್ಲಿ ಭಾರತಕ್ಕೆ ಏನೇನೂ ಮಾಡಿಲ್ಲ ಎಂಬ ಬಿಜೆಪಿಯ ಆರೋಪವನ್ನು ಪ್ರಸ್ತಾವಿಸಿದ ಪ್ರಿಯಾಂಕಾ, "ಏಳು ವರ್ಷಗಳ ಕಾಲ (ಬಿಜೆಪಿ) ಸರಕಾರ ಅಮೇಥಿಯಲ್ಲಿ ಏನು ಮಾಡಿದೆ? ಬಿಜೆಪಿ ಪರವಾಗಿ ಏಕಪಕ್ಷೀಯ ಅಭಿವೃದ್ಧಿ ಮಾತ್ರ ನಡೆದಿದೆ'' ಎಂದರು.

ಬೆಲೆ ಏರಿಕೆಯಿಂದ ಜನರು ಕಷ್ಟಪಡುತ್ತಿದ್ದಾರೆ ಎಂದ ಅವರು, ಪ್ರತಿಭಟನಾ ನಿರತ ರೈತರನ್ನು ಕೊಂದ ಆರೋಪ ಹೊತ್ತಿರುವ ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಇನ್ನೂ ಏಕೆ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಹಾಗೂ  ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದಾಗಿನಿಂದ ಸುಳ್ಳಿನ ಜಾಲವನ್ನು ಹರಡಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News