ಜೈಪುರ ವಿಮಾನ ನಿಲ್ದಾಣದಲ್ಲಿ ಕೀನ್ಯಾ ಮಹಿಳೆಯ ಸೂಟ್‌ಕೇಸ್‌ನಲ್ಲಿ ರೂ.15 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ
ಜೈಪುರ:ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ರೂ.15 ಕೋಟಿ ಮೌಲ್ಯದ ಎರಡು ಕಿಲೋ ತೂಕದ ಹೆರಾಯಿನ್‌ನೊಂದಿಗೆ ಕೀನ್ಯಾದ ಮಹಿಳೆಯೊಬ್ಬರನ್ನು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆಂದು NDTV ವರದಿ ಮಾಡಿದೆ.
ಏರ್ ಅರೇಬಿಯಾ ವಿಮಾನದಲ್ಲಿ ಶಾರ್ಜಾದಿಂದ ಆಗಮಿಸಿದ 33 ವರ್ಷದ ಮಹಿಳೆಯನ್ನು ಲುಕ್ ಔಟ್ ಸುತ್ತೋಲೆ (ಎಲ್ ಒಸಿ) ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು ಎಂದು ಅಧಿಕಾರಿಯೊಬ್ಬರು NDTV ಗೆ ತಿಳಿಸಿದ್ದಾರೆ.
ವಲಸೆ ಇಲಾಖೆಯ ಎಲ್‌ಒಸಿ ಪ್ರಕಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನವೆಂಬರ್ 13 ರಂದು 90 ಕೋಟಿ ರೂ. ಮೌಲ್ಯದ 12.9 ಕೆಜಿ ಹೆರಾಯಿನ್‌ನೊಂದಿಗೆ ತಡೆಹಿಡಿಯಲ್ಪಟ್ಟ ಇಬ್ಬರು ಉಗಾಂಡಾದ ಮಹಿಳಾ ಪ್ರಯಾಣಿಕರು ಒದಗಿಸಿದ್ದ ಮೊಬೈಲ್ ಸಂಖ್ಯೆಯನ್ನೇ ಈ ಮಹಿಳೆಯು ತನ್ನ ವೀಸಾ ಅರ್ಜಿಯಲ್ಲಿ ನೀಡಿದ್ದರು ಎಂದು ಅಂದಾಜಿಸಲಾಗಿದೆ.
ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಸಿಂಡಿಕೇಟ್‌ನ ಭಾಗವಾಗಿ ಮಹಿಳೆಯನ್ನು ಶಂಕಿಸಿ, ಅಧಿಕಾರಿಗಳು ಮಹಿಳೆಯ ವಸ್ತುಗಳನ್ನು ಶೋಧಿಸಿದರು. ಪ್ಲಾಸ್ಟಿಕ್ ಸೂಟ್‌ಕೇಸ್ ಅನ್ನು ಖಾಲಿ ಮಾಡಿದರು ಹಾಗೂ ಎಕ್ಸ್-ರೇ ಪರೀಕ್ಷೆಯ ಮೂಲಕ ಮಾದಕವಸ್ತುವನ್ನು ಹಾಕಿದರು ಎಂದು ತಿಳಿದುಬಂದಿದೆ.